ಗುರುವಾರ , ಅಕ್ಟೋಬರ್ 29, 2020
26 °C

ಕ್ಷಮೆ ಕೋರಿದರೆ ಅಮಾನತು ಆದೇಶ ವಾಪಸಾತಿ ಪರಿಶೀಲನೆ: ರವಿಶಂಕರ್ ಪ್ರಸಾದ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತಮ್ಮ ಅನುಚಿತ ವರ್ತನೆಗಾಗಿ ಕ್ಷಮೆ ಕೋರಿದರೆ ರಾಜ್ಯಸಭೆಯ ಎಂಟು ಸದಸ್ಯರ ಅಮಾನತು ಆದೇಶವನ್ನು ಹಿಂಪಡೆಯುವುದನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ತಿಳಿಸಿದರು.

ಅಮಾನತು ಆದೇಶವನ್ನು ರದ್ದುಪಡಿಸಲು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ವಿವಿಧ ವಿರೋಧಪಕ್ಷಗಳು ಮಂಗಳವಾರ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿ ಹೊರನಡೆದ ಹಿಂದೆಯೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಸಂಸತ್ತಿನ ಹೊರಗೆ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವ ರವಿಶಂಕರ ಪ್ರಸಾದ್ ಅವರು, ಸದಸ್ಯರ ಅನುಚಿತ ವರ್ತನೆಯನ್ನು ಕಾಂಗ್ರೆಸ್ ವಿರೋಧಿಸಲಿದೆ ಎಂದು ನಾವು ಭಾವಿಸಿದ್ದೆವು ಎಂದು ತಿಳಿಸಿದರು.

‘ಇದೆಂಥ ರಾಜಕಾರಣ. ರಾಜ್ಯಸಭೆಯಲ್ಲಿ ಸಂಸದರೊಬ್ಬರು ಟೇಬಲ್ ಮೇಲೆ ನಿಂತು ನರ್ತಿಸುತ್ತಾ ದಾಖಲೆ ಹರಿಯುವ ಚಿತ್ರಣವನ್ನು ನಾವು ಹಿಂದೆ ಎಂದೂ ನೋಡಿರಲಿಲ್ಲ’ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು