ಕರೀಂಗಂಜ್(ಅಸ್ಸಾಂ): ಬಿಎಸ್‌ಎಫ್ ಮತ್ತು ಅಸ್ಸಾಂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಕರೀಂಗಂಜ್ ಜಿಲ್ಲೆಯಲ್ಲಿ ₹45 ಕೋಟಿಗೂ ಅಧಿಕ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಗಿನ ಜಾವ, ಕರೀಂನಗರದ ಹೊಸ ರೈಲು ನಿಲ್ದಾಣದ ಸಮೀಪ ಟ್ರಂಕ್‌ನಲ್ಲಿದ್ದ ಹೆರಾಯಿನ್ ಅನ್ನು ವಶಕ್ಕೆ ಪಡೆಯಲಾಗಿದೆ. ಹೆರಾಯಿನ್ ಅನ್ನು ತ್ರಿಪುರಾದಿಂದ ಕರೀಂಗಂಜ್ ಮಾರ್ಗವಾಗಿ ಮಿಜೋರಾಂಗೆ ಸಾಗಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಿಎಸ್‌ಎಫ್ ಮತ್ತು ಕರೀಂಗಂಜ್ ಪೊಲೀಸರು, 764 ಸಾಬೂನು ಬಾಕ್ಸ್‌ಗಳಲ್ಲಿ ಹಾಕಿ, ಡ್ರೈವರ್ ಕ್ಯಾಬಿನ್‌ನ ಸೀಕ್ರೆಟ್ ಚೇಂಬರ್‌ನಲ್ಲಿ ಇಡಲಾಗಿದ್ದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಹೆರಾಯಿನ್ ಸುಮಾರು 9.47 ಕೆ.ಜಿಗಳಷ್ಟಿದ್ದು, ₹ 47.4 ಕೋಟಿಯಷ್ಟು ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ.
ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.