ಸೋಮವಾರ, ಜೂನ್ 14, 2021
28 °C

ಕೋವಿಡ್‌: ಐಐಟಿ ಪ್ರಾಧ್ಯಾಪಕ ದಿನೇಶ್‌ ಮೋಹನ್‌ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ(ಐಐಟಿ) ಪ್ರಾಧ್ಯಾಪಕ ದಿನೇಶ್‌ ಮೋಹನ್‌ ಅವರು(75) ಕೋವಿಡ್‌ನಿಂದ ಶುಕ್ರವಾರ ನಿಧನರಾದರು ಎಂದು ಐಐಟಿ ನಿರ್ದೇಶಕ ವಿ.ರಾಮ್‌ಗೋಪಾಲ್‌ ರಾವ್‌ ಅವರು ತಿಳಿಸಿದರು. 

‘ರಸ್ತೆ ಸುರಕ್ಷತೆ ಮತ್ತು ಅಪಘಾತ ತಡೆಗಟ್ಟುವಿಕೆ ಬಗೆಗಿನ ತಜ್ಞರಾದ ದಿನೇಶ್‌ ಅವರು ಸಂತ ಸ್ಟೀಫನ್‌ ಆಸ್ಪತ್ರೆಯಲ್ಲಿ ಕೋವಿಡ್‌ಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಶುಕ್ರವಾರ ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ’ ಎಂದು ಅವರು ಹೇಳಿದರು.

ಈ ಬಗ್ಗೆ ಸಂತಾಪ ಸೂಚಿಸಿರುವ ಇತಿಹಾಸ ತಜ್ಞ ಇರ್ಫಾನ್‌ ಹಬೀಬ್‌, ‘ನಾವಿಬ್ಬರು ಇತಿಹಾಸ ಮತ್ತು ವಿಜ್ಞಾನದ ಕುರಿತಾಗಿ ಗಂಭೀರವಾಗಿ ಚರ್ಚಿಸುತ್ತಿದ್ದೆವು’ ಎಂದು ಟ್ವೀಟ್‌ ಮಾಡಿದ್ದಾರೆ.

ಬೈಕ್‌ನ ಹೆಲ್ಮೆಟ್‌ ವಿನ್ಯಾಸದಲ್ಲಿ ಆಧುನೀಕರಣ, ಸೈಕಲ್‌ ಸವಾರರು ಮತ್ತು ಪಾದಚಾರಿಗಳ ಸುರಕ್ಷತೆ, ವಾಹನ ಅಪಘಾತ ಮತ್ತು ರಸ್ತೆ ಸುರಕ್ಷತೆ ಸಂಶೋಧನೆ ಮತ್ತು ಹೆದ್ದಾರಿ ಅಪಘಾತಗಳ ವಿಶ್ಲೇಷಣೆ ಸೇರಿದಂತೆ ಹಲವು ರಸ್ತೆ ಸುರಕ್ಷತೆ ಸಂಬಂಧಿತ ವಿಷಯಗಳಿಗಾಗಿ ದಿನೇಶ್‌ ಜನಪ್ರಿಯತೆ ಪಡೆದಿದ್ದರು.

ಮೋಹನ್‌ ಅವರು ಐಐಟಿ ಬಾಂಬೆ ಮತ್ತು ಮಿಚಿಗನ್‌ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು