ಬ್ರಿಟನ್‌ನ ಸೇನಾ ಮುಖ್ಯಸ್ಥರೊಂದಿಗೆ ಭಾರತೀಯ ಸೇನೆ ಮುಖ್ಯಸ್ಥ ನರವಣೆ ಚರ್ಚೆ

ಲಂಡನ್: ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಬ್ರಿಟನ್‌ನ ಸೇನಾ ಮುಖ್ಯಸ್ಥ ಜನರಲ್ ಸರ್ ನಿಕೋಲಸ್ ಕಾರ್ಟರ್ ಅವರನ್ನು ಭೇಟಿಯಾಗಿ, ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರದ ಕುರಿತು ಚರ್ಚಿಸಿದರು’ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.
‘ಜನರಲ್ ನರವಣೆ ಅವರು ಸೋಮವಾರ (ಜುಲೈ 5) ಬ್ರಿಟನ್‌ಗೆ ಬಂದಿದ್ದಾರೆ’ ಎಂದು ಭಾರತೀಯ ಹೈಕಮಿಷನ್ ಹೇಳಿಕೆ ಬಿಡುಗಡೆ ಮಾಡಿದೆ.
ಯುರೋಪ್ ಪ್ರವಾಸದಲ್ಲಿರುವ ನರವಣೆ ಅವರು ಬ್ರಿಟನ್‌ನಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಬೆನ್ ವಾಲ್ಸೆ ಮತ್ತಿತರರನ್ನು ಭೇಟಿಯಾಗಲಿದ್ದಾರೆ.
General MM Naravane #COAS interacted with General Sir Nicholas Carter, Chief of Defence Staff, #CDS and exchanged views on bilateral defence cooperation.#IndiaUKFriendship pic.twitter.com/sygrhRvq0D
— ADG PI - INDIAN ARMY (@adgpi) July 6, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.