ಶನಿವಾರ, ಡಿಸೆಂಬರ್ 4, 2021
20 °C

ದಾರಿ ತಪ್ಪಿದ ಚೀನಿಯರಿಗೆ ಅನ್ನ ನೀಡಿದ ಭಾರತ ಸೇನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ‌ ಚೀನಾ ಸೇನೆ ಆಕ್ರಮಣಕಾರಿ ನಡವಳಿಕೆ ತೋರುತ್ತಿರುವಾಗಲೇ ಭಾರತೀಯ ಸೇನೆಯು ಚೀನಾ ಪ್ರಜೆಗಳಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಸಮುದ್ರ ಮಟ್ಟಕ್ಕಿಂತ 17,500 ಅಡಿ ಎತ್ತರದಲ್ಲಿ ದಾರಿ ತಪ್ಪಿದ ಮೂವರು ಚೀನಾ ಪ್ರಜೆಗಳಿಗೆ ಭಾರತೀಯ ಸೈನಿಕರು ಆಹಾರ, ಬೆಚ್ಚನೆಯ ಉಡುಪು ಮತ್ತು ವೈದ್ಯಕೀಯ ನೆರವು ನೀಡಿದ್ದಾರೆ.

‘ಶೂನ್ಯಕ್ಕಿಂತಲೂ ಕಡಿಮೆ ತಾಪಮಾನವಿರುವ ಪ್ರದೇಶದಲ್ಲಿ ಮಹಿಳೆ ಸೇರಿದಂತೆ ಮೂವರು ಚೀನಾ ಪ್ರಜೆಗಳು ಸಿಲುಕಿದ್ದರು. ಅಲ್ಲಿಗೆ ತೆರಳಿದ ನಮ್ಮ ಯೋಧರು ಅವರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದಾರೆ’ ಎಂದು ಭಾರತೀಯ ಸೇನೆ ಟ್ವೀಟ್‌ ಮಾಡಿದೆ. ‘ಭಾರತೀಯ ಯೋಧರ ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಚೀನಾ ಪ್ರಜೆಗಳು ಕೃತಜ್ಞತೆ ಸಲ್ಲಿಸಿದ್ದಾರೆ’ ಎಂದೂ ಸೇನೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು