ಬುಧವಾರ, ಜುಲೈ 28, 2021
26 °C

ಭಾರಿ ಮಳೆ: ಭೂಕುಸಿತ, ಜಮ್ಮು–ಕಾಶ್ಮೀರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬನಿಹಾಲ್‌/ಜಮ್ಮು: ರಂಬಾನ್‌ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಈ ಹೆದ್ದಾರಿಯಲ್ಲಿ ಮಗರಕೋಟ್‌ ಬಳಿ ಭೂಕುಸಿತವಾಗಿದೆ. ಇದರಿಂದ 500ಕ್ಕೂ ಅಧಿಕ ಭಾರಿ ಮತ್ತು ಲಘು ವಾಹನಗಳು ಹೆದ್ದಾರಿಯ ವಿವಿಧ ಹಂತಗಳಲ್ಲಿ ಸ್ಥಗಿತವಾಗಿವೆ.

ಭೂಕುಸಿತದಿಂದಾಗಿ ಎಲ್ಲ ವಾಹನಗಳ ಚಾಲಕರಿಗೆ ಬನಿಹಾಲ್‌ ಅಥವಾ ರಂಬಾನ್‌ ಕಡೆಯಿಂದ ಹೋಗುವಂತೆ ಕೋರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು