ಮಂಗಳವಾರ, ಫೆಬ್ರವರಿ 7, 2023
27 °C

ಮುನ್ನೆಡೆ ಕಾಯ್ದುಕೊಂಡ ನೇಪಾಳಿ ಕಾಂಗ್ರೆಸ್‌ ಮೈತ್ರಿಕೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಠ್ಮಂಡು: ನೇಪಾಳ ಸಂಸತ್‌ ಚುನಾವಣೆಯಲ್ಲಿ ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟವು ಶನಿವಾರವೂ ಮುನ್ನಡೆ ಕಾಯ್ದುಕೊಂಡಿದೆ. ಈವರೆಗೂ 150 ಸ್ಥಾನಗಳ ಫಲಿತಾಂಶ ಘೋಷಣೆಯಾಗಿದೆ. ಈ ಪೈಕಿ 77 ಸ್ಥಾನಗಳಲ್ಲಿ ಮೈತ್ರಿಕೂಟ ಗೆದ್ದಿದೆ.

ಸರಳ ಬಹುಮತ ಪಡೆಯಲು ಪಕ್ಷ ಅಥವಾ ಮೈತ್ರಿಕೂಟಕ್ಕೆ 138 ಸ್ಥಾನಗಳ ಅಗತ್ಯವಿದೆ. ನೇರ ಮತದಾನದಲ್ಲಿ ನೇಪಾಳಿ ಕಾಂಗ್ರೆಸ್‌ ಪಕ್ಷ ಏಕಾಂಗಿಯಾಗಿ ಈವರೆಗೂ 51 ಸ್ಥಾನಗಳನ್ನು ಗೆದ್ದಿದೆ. ಅದರ ಮಿತ್ರ ಪಕ್ಷಗಳಾದ ಸಿಪಿಎನ್‌– ಮಾವೋಯಿಸ್ಟ್‌ ಸೆಂಟರ್‌ ಮತ್ತು ಸಿಪಿಎನ್‌–ಯುನಿಫೈಡ್‌ ಸೋಶಿಯಲಿಸ್ಟ್‌ ಪಕ್ಷಗಳು ಕ್ರಮವಾಗಿ 16 ಮತ್ತು 10 ಸ್ಥಾನಗಳನ್ನು ಗೆದ್ದಿವೆ. ದಿ ಲೋಕತಾಂತ್ರಿಕ್‌ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನಮೋರ್ಚಾ ಪಕ್ಷಗಳು ಕ್ರಮವಾಗಿ 4 ಮತ್ತು 1 ಸ್ಥಾನಗಳಲ್ಲಿ ಜಯಗಳಿಸಿವೆ.

ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೃತೃತ್ವದ ಸಿಪಿಎನ್‌–ಯುಎಂಎಲ್‌ ಮೈತ್ರಿಕೂಟವು ಇದುವರೆಗೆ 49 ಸ್ಥಾನಗಳನ್ನು ಗೆದ್ದಿದೆ. 

ಸಂಸತ್‌ ಮತ್ತು ಏಳು ಪ್ರಾಂತೀಯ ವಿಧಾನಸಭೆಗಳಿಗೆ ಕಳೆದ ಭಾನುವಾರ ಚುನಾವಣೆ ನಡೆದಿತ್ತು. 275 ಸದಸ್ಯ ಬಲದ ಸಂಸತ್‌ ಚುನಾವಣೆಯಲ್ಲಿ 165 ಸ್ಥಾನಗಳನ್ನು ನೇರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸೋಮವಾರದಿಂದಲೇ ಮತ ಎಣಿಕೆ ಆರಂಭವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು