ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ನಾಯಿಗೆ ಆಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಸೋದರ ಸಂಬಂಧಿಯ ಹತ್ಯೆ

Last Updated 6 ನವೆಂಬರ್ 2022, 13:59 IST
ಅಕ್ಷರ ಗಾತ್ರ

ಪಾಲಕ್ಕಾಡ್‌, ಕೇರಳ: ‘ಸಾಕು ನಾಯಿಗೆ ಆಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ತನ್ನ ಸೋದರ ಸಂಬಂಧಿಯನ್ನು ಥಳಿಸಿ ಹತ್ಯೆ ಮಾಡಿದ್ದಾನೆಂದು ಹೇಳಲಾದ ಹಕೀಂ (27) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಅರ್ಷದ್‌ (21) ಎಂಬಾತ ಮೃತ ವ್ಯಕ್ತಿ. ಈ ಘಟನೆ ಗುರುವಾರ ರಾತ್ರಿ ನಡೆದಿದೆ.

‘ಗಾಯಾಳು ಮೃತಪಟ್ಟ ಘಟನೆಯ ಬಗ್ಗೆ ಆಸ್ಪತ್ರೆಯೊಂದರ ವೈದ್ಯರು ನಮಗೆ ಮಾಹಿತಿ ನೀಡಿದರು. ಹಕೀಂನನ್ನು ಶನಿವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಕೀಂ, ಅರ್ಷದ್ ಮೇಲೆ ಸಾಂದರ್ಭಿಕವಾಗಿ ಹಲ್ಲೆ ನಡೆಸಿದಾಗ ಈ ಘಟನೆ ನಡೆದಿರುವುದಾಗಿಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ’ ಎಂದೂ ಪೊಲೀಸರು ಹೇಳಿದರು.

‘ಹಕೀಂ ಇಲ್ಲಿ (ಪಾಲಕ್ಕಾಡ್‌) ವ್ಯಾಪಾರವನ್ನು ಮಾಡುತ್ತಿದ್ದ. ಆತನೊಂದಿಗೆ ಅರ್ಷದ್ ಕೂಡ ಕೆಲಸ ಮಾಡುತ್ತಿದ್ದ. ಇಬ್ಬರೂ ಒಟ್ಟಿಗೆ ಇರುತ್ತಿದ್ದರು.ಈ ಹಿಂದೆಯೂ ಹಕೀಂ, ಅರ್ಷದ್‌ನನ್ನು ಥಳಿಸಿರುವುದು ಗೊತ್ತಾಗಿದೆ. ಆದರೆ, ಈ ಬಾರಿನಾಯಿಯ ಬೆಲ್ಟ್ ಮತ್ತು ದೊಣ್ಣೆಯಿಂದ ಮಾರಣಾಂತಿಕವಾಗಿ ಥಳಿಸಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT