ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರು ಬೇಸಿಗೆ: ಏರ್‌ಕೂಲರ್ ಸ್ಫೋಟಗೊಂಡು 7 ವರ್ಷದ ಬಾಲಕ ಸಾವು

Last Updated 3 ಮೇ 2022, 13:19 IST
ಅಕ್ಷರ ಗಾತ್ರ

ರತ್ಲಮ್ (ಮಧ್ಯಪ್ರದೇಶ): ಬಿರು ಬೇಸಿಗೆಯಿಂದ ತತ್ತರಿಸಿದ್ದ ಬಾಲಕನೊಬ್ಬ ಏರ್ ಕೂಲರ್ ಮೊರೆ ಹೋಗಿದ್ದಾಗ ದುರತಂವೊಂದು ನಡೆದಿದೆ. ಏರ್‌ಕೂಲರ್‌ ಸ್ಫೋಟಗೊಂಡು 7 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರತ್ಲಮ್‌ನಲ್ಲಿ ಮಂಗಳವಾರ ನಡೆದಿದೆ.

ಮೃತ ಬಾಲಕನನ್ನು ದಕ್ಷ ಎಂದು ಗುರುತಿಸಲಾಗಿದೆ.

ಮೃತ ಬಾಲಕ ಸೆಕೆಯಿಂದ ಪಾರಾಗಲು ಮನೆಯಲ್ಲಿದ್ದ ಏರ್‌ಕೂಲರ್ ಬಳಸಲು ಮುಂದಾಗಿದ್ದಾನೆ. ಈ ವೇಳೆ ಏರ್‌ಕೂಲರ್‌ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಸಿಡಿದಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ.

ಘಟನೆ ನಡೆದ ವೇಳೆ ಬಾಲಕನ ತಂದೆ ಹಾಗೂ ತಾಯಿ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT