ಭಾನುವಾರ, ಜನವರಿ 17, 2021
20 °C

ಐಇಡಿ ನಿಷ್ಕ್ರೀಯ: ತಪ್ಪಿದ ಅನಾಹುತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಪೂಂಚ್‌ ಜಿಲ್ಲೆಯ ಮೆಂಧಾರ್‌ ವಲಯದಲ್ಲಿ ಮೋಟರ್‌ ಸೈಕಲ್‌ವೊಂದರಲ್ಲಿ ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ)  ಸೂಕ್ತ ಸಮಯಕ್ಕೆ ನಿಷ್ಕ್ರೀಯಗೊಳಿಸಲಾಗಿದ್ದು, ದೊಡ್ಡ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ 10 ಗಂಟೆಗೆ ಈ ಬಾಂಬ್‌ ಇರಿಸಲಾಗಿದ್ದು, ಬಾಂಬ್‌ ನಿಷ್ಕ್ರಿಯ ದಳದವರು ಅದನ್ನು ಭಾನುವಾರ ಮಧ್ಯಾಹ್ನ 1 ಗಂಟೆಗೆ ನಾಶಪಡಿಸಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ.  ಉಗ್ರರು ಬಾಂಬ್‌ ಅಳವಡಿಸಿದ್ದ ವಾಹನವನ್ನು ಈ ಸ್ಥಳದಲ್ಲಿ ಇರಿಸಿ, ಸಮೀಪವೇ ಇರುವ ಅರಣ್ಯ ಪ್ರದೇಶಕ್ಕೆ ತೆರಳಿರುವ ಶಂಕೆ ಇದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಆಂಗ್ರಾಲ್ ಹೇಳಿದರು.

ಉಗ್ರರ ಪತ್ತೆಗಾಗಿ ಪೊಲೀಸ್‌ ಮತ್ತು ರಾಷ್ಟ್ರೀಯ ರೈಫಲ್ಸ್ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು