ಗುಂಪು ಹಲ್ಲೆ, ಯುವಕ ಸಾವು

ನವದೆಹಲಿ: ಪಶ್ಚಿಮ ದೆಹಲಿಯ ರಘುವೀರ್ ನಗರದಲ್ಲಿ 27 ವರ್ಷದ ಯುವಕನೊಬ್ಬನ ಮೇಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಯುವಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.
ಮೃತನನ್ನು ಇಲ್ಲಿನ ಶಿವಾಜಿ ವಿಹಾರ್‌ನಲ್ಲಿನ ಜನತಾ ಕಾಲೊನಿ ನಿವಾಸಿ ಸತೇಂದರ್ ಎಂದು ಗುರುತಿಸಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದೂ ಪೊಲೀಸರು ಭಾನುವಾರ ತಿಳಿಸಿದರು.
‘ಸತೇಂದರ್ ಮತ್ತು ಗೆಳೆಯರಾದ ನಿತಿನ್, ಮನೀಶ್ ಅವರು ಶನಿವಾರ ಮಧ್ಯರಾತ್ರಿ ನಿತಿನ್ ಎಂಬವನ ಜೊತೆಗೆ ಜಗಳವಾಡಿದ್ದರು. ಕೆಲಹೊತ್ತಿನ ನಂತರ ಬೆಳಗಿನ ಜಾವದಲ್ಲಿ ನಿತಿನ್ ಮತ್ತು ಆತನ ಗೆಳೆಯರು ಗುಂಪುಗೂಡಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ’ ಎಂದು ಡಿಸಿಪಿ ದೀಪಕ್ ಪುರೋಹಿತ್ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.