ಗುರುವಾರ , ಸೆಪ್ಟೆಂಬರ್ 23, 2021
20 °C

ಸುಪ‍್ರೀಂಕೋರ್ಟ್‌ ಹೊರಗೆ ಆತ್ಮಹತ್ಯೆಗೆ ಯತ್ನ; ಪೊಲೀಸರಿಂದ ರಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸುಪ್ರೀಂಕೋರ್ಟ್‌ನ ಹೊರಗೆ ಇಬ್ಬರು ಸೋಮವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ನ್ಯಾಯಾಲಯದ ಹೊರಗೆ ಮಹಿಳೆ ಮತ್ತು ಪುರುಷರೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯದ ಪೊಲೀಸ್‌ ಪಡೆ ಕೂಡಲೇ ಅವರಿಬ್ಬರಿಗೆ ಕಂಬಳಿ ಸುತ್ತಿ, ಬೆಂಕಿಯನ್ನು ನಂದಿಸಿದೆ. ಬಳಿಕ ಅವರನ್ನು ರಾಮ್‌ ಮನೋಹರ್‌ ಲೊಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ನವದೆಹಲಿಯ ಪೊಲೀಸ್‌ ಉಪ ಆಯುಕ್ತ ದೀಪಕ್‌ ಯಾದವ್‌ ಅವರು ಮಾಹಿತಿ ನೀಡಿದರು.

‘ಈ ಕೃತ್ಯದ ಹಿಂದಿನ ಕಾರಣವೇನೆಂಬುದು ತಿಳಿದಿಲ್ಲ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ’  ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು