ಮಂಗಳವಾರ, ಮೇ 11, 2021
24 °C
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದ ಘಟನೆ, ನಾಲ್ವರಿಗೆ ಗಾಯ

ಕೊರೊನಾ ಔಷಧಿ ನೀಡಲು ತೆರಳುತ್ತಿದ್ದ ವೈದ್ಯಕೀಯ ತಂಡದ ಮೇಲೆ ಹಲ್ಲೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಬಲಿಯಾ (ಉತ್ತರ ಪ್ರದೇಶ): ಕೊರೊನಾ ಸೋಂಕಿತರಿಗೆ ಔಷಧ ನೀಡುವುದಕ್ಕಾಗಿ ಹಳ್ಳಿಯೊಂದಕ್ಕೆ ತೆರಳುತ್ತಿದ್ದ  ವೈದ್ಯಕೀಯ ತಂಡದ ವಾಹನದ ಮೇಲೆ ಗುಂಪೊಂದು ಇಲ್ಲಿಗೆ ಸಮೀಪದ ಪಾಸ್ವಾನ್ ಚೌಕ್‌ ಎಂಬ ಗ್ರಾಮದಲ್ಲಿ ಹಲ್ಲೆ ನಡೆಸಿದ್ದರಿಂದ ವಾಹನದಲ್ಲಿದ್ದು ಇಬ್ಬರು ವೈದ್ಯರು, ಚಾಲಕ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ವೈದ್ಯಕೀಯ ಸಿಬ್ಬಂದಿ ನೀರಜ್‌ ಕುಮಾರ್ ಸಿಂಗ್‌ ನೀಡಿರುವ ದೂರಿನಂತೆ ಬೈರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 60 ಜನರಿದ್ದ ಗುಂಪು ವೈದ್ಯಕೀಯ ತಂಡದ ವಾಹನವನ್ನು ಸುತ್ತುವರಿದು, ಹಲ್ಲೆ ನಡೆಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಯ್ ಯಾದವ್ ತಿಳಿಸಿದರು.

‘ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ಘನಶ್ಯಾಮ ಎಂಬುವವರಿಗೆ ಔಷಧಗಳನ್ನು ನೀಡಲು ಮತ್ತು ಅವರು ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸ್ತವ್ಯ ಮಾಡುತ್ತಿದ್ದಾರಾ ಎಂದು ಪರಿಶೀಲಿಸಲು ಈ ತಂಡ ಗ್ರಾಮಕ್ಕೆ ತೆರಳುತ್ತಿತ್ತು‘ ಎಂದು ಯಾದವ್ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿತೇಂದ್ರ ಎಂಬಾತನನ್ನು ಬಂಧಿಸಲಾಗಿದೆ ಎಂದು ಯಾದವ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು