ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಟರ್ಜಿ ಹಗರಣ | ನನಗೆ ಗೊತ್ತಿಲ್ಲದಂತೆ ಮನೆಯಲ್ಲಿ ಹಣ ಇಡಲಾಗಿದೆ: ಅರ್ಪಿತಾ ಮುಖರ್ಜಿ

Last Updated 2 ಆಗಸ್ಟ್ 2022, 11:09 IST
ಅಕ್ಷರ ಗಾತ್ರ

ಕೋಲ್ಕತ್ತ : ‘ನನಗೆ ಗೊತ್ತಿಲ್ಲದಂತೆ ಮನೆಯಲ್ಲಿ ಹಣ ಇಡಲಾಗಿದೆ’ ಎಂದು ಹಣ ಅಕ್ರಮ ವರ್ಗಾವಣೆ ಆರೋಪದಡಿ ಬಂಧನಕ್ಕೊಳಗಾಗಿರುವ ಅರ್ಪಿತಾ ಮುಖರ್ಜಿ ಮಂಗಳವಾರ ಹೇಳಿದ್ದಾರೆ.

ಅರ್ಪಿತಾ ಅವರು ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತೆ.ಅವರಿಗೆ ಸೇರಿದ ಎರಡು ಫ್ಲ್ಯಾಟ್‌ಗಳಲ್ಲಿ ಹೋದ ವಾರ ಶೋಧ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸುಮಾರು ₹50 ಕೋಟಿ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಿದ್ದರು.

ಪಾರ್ಥ ಹಾಗೂ ಅರ್ಪಿತಾ ಅವರನ್ನು ಆರೋಗ್ಯ ತಪಾಸಣೆಗಾಗಿ ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಮಂಗಳವಾರ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ನನ್ನ ಗಮನಕ್ಕೆ ತರದೆ ಮನೆಯಲ್ಲಿ ಹಣ ಇಡಲಾಗಿದೆ’ ಎಂದಿದ್ದಾರೆ. ಪಾರ್ಥ ಕೂಡ ಜಪ್ತಿ ಮಾಡಿರುವ ಹಣ ತಮಗೆ ಸೇರಿದ್ದಲ್ಲ ಎಂದು ಹೇಳಿದ್ದರು.

ಇವರ ಕಸ್ಟಡಿ ಅವಧಿಯು ಬುಧವಾರ ಕೊನೆಗೊಳ್ಳಲಿದ್ದು, ಇ.ಡಿ ಅಧಿಕಾರಿಗಳು ಇಬ್ಬರನ್ನೂ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಮತ್ತೆರಡು ಫ್ಲ್ಯಾಟ್‌ಗಳಲ್ಲಿ ಇ.ಡಿ ಶೋಧ: ಇ.ಡಿ ಅಧಿಕಾರಿಗಳು ಅರ್ಪಿತಾ ಅವರಿಗೆ ಸೇರಿದೆ ಎನ್ನಲಾಗಿರುವ ಮತ್ತೆರಡು ಫ್ಲ್ಯಾಟ್‌ ಹಾಗೂ ಅಂಗಡಿಯೊಂದರಲ್ಲಿ ಮಂಗಳವಾರ ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT