ಬುಧವಾರ, ಆಗಸ್ಟ್ 4, 2021
28 °C

ದೆಹಲಿ ಮೆಟ್ರೊ ಬೋಗಿಯಲ್ಲಿ ’ಮಂಗಾಟ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ದೆಹಲಿ ಮೆಟ್ರೊ ರೈಲಿನ ಬೋಗಿಯೊಂದರಲ್ಲಿ ಮಂಗವೊಂದು ಕಂಬಿಯಿಂದ ಕಂಬಿಗೆ ಹಾರುತ್ತಾ, ಅಂತಿಮವಾಗಿ ಆಸನದಲ್ಲಿ ಅಸೀನವಾಗುವ ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೋಡುಗರ ಹುಬ್ಬೇರಿಸಿದೆ.

ಈ ಘಟನೆ ಶನಿವಾರ ಸಂಜೆ ಮೆಟ್ರೊ ರೈಲು ಸಂಚಾರದ ನೀಲಿ ಮಾರ್ಗದಲ್ಲಿ ನಡೆದಿದೆ. ಪ್ರಯಾಣಿಕರು ಇರುವಂತೆಯೇ ಬೋಗಿಯನ್ನು ಪ್ರವೇಶಿಸಿದ ಮಂಗ, ಒಂದು ಹಂತದಲ್ಲಿ ಕಿಟಕಿ ಬಳಿ ಸಾಗಿ ಹೊರಹೋಗಲೂ ಯತ್ನಿಸಿದೆ.

ಸಂಜೆ 4.45ರ ವೇಳೆಗೆ ಯಮುನಾ ಬ್ಯಾಂಕ್‌ ಸ್ಟೇಷನ್‌ ಮತ್ತು ಐ.ಪಿ. ಸ್ಟೇಷನ್‌ ನಡುವೆ ಕೋತಿಯು ರೈಲಿನ ಬೋಗಿಯಲ್ಲಿ ಕಾಣಿಸಿಕೊಂಡಿದೆ. ಪ್ರಯಾಣಿಕರಿಂದ ಅಧಿಕಾರಿಗಳ ಗಮನಕ್ಕೆ ಬರುವ ವೇಳೆಗೆ ನಿರ್ಗಮಿಸಿದೆ.

‘ಕೋತಿಯಿಂದ ಯಾವುದೇ ಪ್ರಯಾಣಿಕರಿಗೆ ಪೆಟ್ಟಾಗಿಲ್ಲ. ತದನಂತರವೂ ನಿಲ್ದಾಣದಲ್ಲಿ ಕೋತಿ ಕಾಣಿಸಿಕೊಂಡಿಲ್ಲ’ ಎಂದು ಡಿಎಂಆರ್‌ಸಿ ಅಧಿಕಾರಿಗಳು ಭಾನುವಾರ ತಿಳಿಸಿದರು.

ಆದರೆ, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಟ್ವಿಟರ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಯಾಣಿಕರೊಬ್ಬರು, ‘ಅಪರೂಪದ ಅತಿಥಿ’ಯಾದ ಪ್ರಯಾಣಿಕರೊಬ್ಬರು ಬೋಗಿಯಲ್ಲಿ ಮನಸೋ ಇಚ್ಛೆ ಓಡಾಡಿದ್ದು, ಅಂತಿಮವಾಗಿ ಪ್ರಯಾಣಿಕರೊಬ್ಬರ ಪಕ್ಕದ ಆಸನದಲ್ಲಿ ಕುಳಿತರು’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು