ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ ಸ್ಪರ್ಧೆ: ಕನ್ನಡಿಗರಿಬ್ಬರು ಆಯ್ಕೆ

Last Updated 27 ಡಿಸೆಂಬರ್ 2021, 1:44 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪಿಎಂ–ಯುವ (ಯಂಗ್‌ ಅಪ್‌ಕಮಿಂಗ್‌ ವರ್ಸಟೈಲ್‌ ಆಥರ್‌ ಸ್ಕೀಮ್‌) ಮಾರ್ಗದರ್ಶನ ಯೋಜನೆ ಅಡಿ ‘ಭಾರತದ ರಾಷ್ಟ್ರೀಯ ಚಳವಳಿ’ ವಿಷಯದ ಕುರಿತು ಪುಸ್ತಕ ರಚನೆ ಸ್ಪರ್ಧೆಆಯೋಜಿಸಲಾಗಿತ್ತು. 75 ಬರಹಗಾರರು ಸ್ಪರ್ಧೆಯಲ್ಲಿ ಆಯ್ಕೆ ಆಗಿದ್ದಾರೆ. ಇದರಲ್ಲಿ ಇಬ್ಬರು ಕನ್ನಡಿಗರು ಸೇರಿದ್ದಾರೆ.

ಜಯಸಿಂಹ ಕೆ.ಆರ್‌ ಮತ್ತು ತೇಜಸ್‌ ಎಚ್‌. ಬದಳ ಅವರು ಕನ್ನಡದಲ್ಲಿ ಪುಸ್ತಕ ಬರೆದ ಸ್ಪರ್ಧಿಗಳು. 30 ವರ್ಷ ವಯಸ್ಸಿಗಿಂತ ಕೆಳಗಿರುವವರಿಗಾಗಿ, ಅಖಿಲ ಭಾರತ ಮಟ್ಟದಲ್ಲಿ ನ್ಯಾಷನಲ್‌ ಬುಕ್‌ ಟ್ರಸ್ಟ್‌ (ಎನ್‌ಎಂಐ) ಈ ಸ್ಪರ್ಧೆ ಆಯೋಜಿಸಿತ್ತು.ಮೈಗೌ ಮತ್ತು ನ್ಯಾಷನಲ್ ಬುಕ್‌ ಟ್ರಸ್ಟ್‌ ವೇದಿಕೆಗಳ ಮೂಲಕ ಸ್ಪರ್ಧೆ ನೆಡೆಸಲಾಗಿತ್ತು. 16,000 ಸ್ಪರ್ಧಿಗಳು ಭಾಗವಹಿಸಿದ್ದರು. 22 ಭಾಷೆಗಳು ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕ ಬರೆದಿದ್ದರು. ಮೂರು ಹಂತಗಳಲ್ಲಿ ಪುಸ್ತಕಗಳನ್ನು ಪರಿಶೀಲಿಸಲಾಗಿತ್ತು.

ಆಯ್ಕೆ ಆಗಿರುವ 75 ಲೇಖಕರಲ್ಲಿ 38 ಜನ ಪುರುಷರು ಮತ್ತು 37 ಜನರು ಮಹಿಳೆಯರು ಇದ್ದಾರೆ. 16 ಬರಹಗಾರರು 15ರಿಂದ 20 ವರ್ಷ ವಯೋಮಾನದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT