ಬುಧವಾರ, ಆಗಸ್ಟ್ 4, 2021
27 °C

ಮಹಾರಾಷ್ಟ್ರಕ್ಕೆ ತಲುಪಿದ ಎರಡನೇ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಗುಜರಾತ್‌ನ ಜಾಮ್‌ನಗರದಿಂದ ದ್ರವೀಕೃತ ಆಮ್ಲಜನಕ ಟ್ಯಾಂಕರ್‌ಗಳನ್ನು ಹೊತ್ತುತಂದ ‘ಆಕ್ಸಿಜನ್‌ ಎಕ್ಸ್‌ಪ್ರೆಸ್’ ಮುಂಬೈನ ಕಲಂಬೋಲಿಗೆ ಸೋಮವಾರ ತಲುಪಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಈ ರೈಲು 44 ಟನ್‌ನಷ್ಟು ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊತ್ತು ತಂದಿದೆ. ಪ್ರತಿ ಟ್ಯಾಂಕರ್‌ಗಳು 15 ಟನ್‌ ದ್ರವೀಕೃತ ಆಮ್ಲಜನಕವನ್ನು ಹೊಂದಿದೆ. ಇದು ಮಹಾರಾಷ್ಟ್ರಕ್ಕೆ ಆಗಮಿಸಿದ ಎರಡನೇ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಆಗಿದ್ದು, ರೈಲು ಬೆಳಿಗ್ಗೆ 11.30ರ ಸುಮಾರಿಗೆ ನವಿ ಮುಂಬೈನ ಕಲಂಬೋಲಿಗೆ ತಲುಪಿದೆ. ಈ ರೈಲು 17 ಗಂಟೆಗಳಲ್ಲಿ ಸುಮಾರು 860 ಕಿ.ಮೀ ದೂರವನ್ನು ಕ್ರಮಿಸಿದೆ’ ಎಂದು ಅವರು ಹೇಳಿದರು.

‘ಈ ರೈಲು ಜಾಮ್‌ನಗರದ ಹಪದಿಂದ ಭಾನುವಾರ ಸಂಜೆ ಆರು ಗಂಟೆಗೆ ತೆರಳಿತ್ತು. ವೀರಂಗಂ, ಅಹಮದಾಬಾದ್, ವಡೋದರಾ ಮತ್ತು ಸೂರತ್ ಮೂಲಕ ಪ್ರಯಣಿಸಿ ಸೋಮವಾರ ಬೆಳಿಗ್ಗೆ ವೇಳೆಗೆ ರೈಲು ಮಹಾರಾಷ್ಟ್ರ ಪ್ರವೇಶಿಸಿದೆ’ ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ತಿಳಿಸಿದರು.

ಈ ದ್ರವೀಕೃತ ವೈದ್ಯಕೀಯ ಆಮ್ಲಜನಕ ಟ್ಯಾಂಕರ್‌ಗಳನ್ನು ಜಾಮ್‌ನಗರದ ರಿಲಯನ್ಸ್‌ ಇಂಡಸ್ಟ್ರೀಸ್‌ ವಿತರಣೆ ಮಾಡಿದೆ.

‘ಇದು ಪಶ್ಚಿಮ ರೈಲ್ವೆ ವಿಭಾಗದಲ್ಲಿ ಚಲಿಸಿದ ಮೊದಲ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಆಗಿದೆ. ರೈಲಿನ ತ್ವರಿತ ಚಲನೆಗಾಗಿ ಅಧಿಕಾರಿಗಳು ‘ಹಸಿರು ಕಾರಿಡರ್‌’ ವ್ಯವಸ್ಥೆ ಕಲ್ಪಿಸಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು