ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಾಕ್ರಮ ದಿನ: 21 ಅಂಡಮಾನ್‌ ದ್ವೀಪಗಳಿಗೆ ವೀರ ಯೋಧರ ಹೆಸರು –ಪ್ರಧಾನಿ ಮೋದಿ

Last Updated 23 ಜನವರಿ 2023, 10:58 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್‌ ಮತ್ತು ನಿಕೋಬಾರ್‌ನ 21 ದ್ವೀಪಗಳಿಗೆ ದೇಶದ ಅತ್ಯುತ್ತಮ ಸೇನಾ ಪ್ರಶಸ್ತಿಯಾದ ಪರಂವೀರ ಚಕ್ರ ಪ್ರಶಸ್ತಿ ಪಡೆದವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು.

ಇಂದು (ಜನವರಿ 23) ನೇತಾಜಿ ಸುಬಾಷ್ ಚಂದ್ರ ಬೋಸ್ ಅವರ 126ನೇ ಜಯಂತಿ. ಈ ದಿನವನ್ನು ಪರಾಕ್ರಮ ದಿವಸ ಎಂದು ಆಚರಣೆ ಮಾಡಲಾಗುತ್ತದೆ.

ಪರಂವೀರ ಚಕ್ರ ಪ್ರಶಸ್ತಿ ವಿಜೇತರಿಗೆ ಸಮರ್ಪಿತವಾದ ದ್ವೀಪಗಳ ಹೆಸರುಗಳನ್ನು ಪ್ರಧಾನಿ ಮೋದಿ ವರ್ಚುವಲ್ (ವಿಡಿಯೊ) ಆಗಿ ಹೆಸರಿಸಿದರು.

ದ್ವೀಪಗಳಿಗೆ ಇಡಲಾದ ಹೆಸರುಗಳು ಇಂತಿವೆ...

1) ಧನ್‌ ಸಿಂಗ್‌ ದ್ವೀಪ (ಲೆಫ್ಟಿನೆಂಟ್ ಕರ್ನಲ್ ಧನ್ ಸಿಂಗ್ ಥಾಪಾ ಮಗರ್)

2 ತಾರಪೊರ್‌ ದ್ವೀಪ (ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್)

3) ಕರಂ ಸಿಂಗ್‌ ದ್ವೀಪ್ (ಕ್ಯಾ. ಕರಂ ಸಿಂಗ್‌)

4) ಬನಾ ದ್ವೀಪ (ಕ್ಯಾಪ್ಟನ್ ಬನಾ ಸಿಂಗ್)

5) ಎಕ್ಕಾ ದ್ವೀಪ (ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ)

6) ಖೇತರ್ಪಾಲ್ ದ್ವೀಪ (ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್)

7) ಪಾಂಡೆ ದ್ವೀಪ (ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ)

8) ಹೊಶಿಯಾರ್‌ ದ್ವೀಪ (ಕರ್ನಲ್ ಹೋಶಿಯಾರ್ ಸಿಂಗ್ ದಹಿಯಾ)

9) ಶೈತಾನ್‌ ದ್ವೀಪ (ಮೇಜರ್ ಶೈತಾನ್ ಸಿಂಗ್ ಭಾಟಿ)

10) ಜಾದುನಾಥ್‌ ದ್ವೀಪ (ನಾಯಕ್ ಜಾದುನಾಥ್ ಸಿಂಗ್)

11) ಯೋಗೇಂದ್ರ ದ್ವೀಪ (ಸುಬೆದಾರ್ ಮೇಜರ್‌ ಯೋಗೇಂದ್ರ ಸಿಂಗ್‌ ಯಾದವ್‌)

12) ಹಮೀದ್‌ ದ್ವೀಪ ( ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ ತಾರಾಪೋರ್)

13) ರಾಣೆ ದ್ವೀಪ (ಮೇಜರ್ ರಾಮ ರಘೋಬ ರಾಣೆ)

14) ರಾಮಸ್ವಾಮಿ ದ್ವೀಪ (ಮೇಜರ್ ರಾಮಸ್ವಾಮಿ ಪರಮೇಶ್ವರನ್)

15) ಬಾತ್ರಾ ದ್ವೀಪ ( ಕ್ಯಾಪ್ಟನ್ ವಿಕ್ರಮ್ ಬಾತ್ರಾ)

16) ಜೋಗಿಂದರ್‌ ದ್ವೀಪ (ಸುಬೇದಾರ್ ಜೋಗಿಂದರ್ ಸಿಂಗ್ ಸಹನಾನ್)

17) ಸಲಾರಿಯಾ ದ್ವೀಪ (ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲಾರಿಯಾ)

18) ಪಿರು ದ್ವೀಪ ( ಕಂಪನಿಯ ಹವಾಲ್ದಾರ್ ಮೇಜರ್ ಪೀರು ಸಿಂಗ್ ಶೆಖಾವತ್)

19) ಸೋಮನಾಥ್‌ ದ್ವೀಪ (ಮೆ.ಸೋಮನಾಥ್‌ ಶರ್ಮಾ)

20) ಸೆಖೋನ್ ದ್ವೀಪ (ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖೋನ್)

21) ಸಂಜಯ್‌ ದ್ವೀಪ್‌ (ಸುಬೇದಾರ್ ಮೇಜರ್ ಸಂಜಯ್ ಕುಮಾರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT