ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 14ಕ್ಕೆ ಪ್ರಧಾನಿಯಿಂದ ’ಅರ್ಜುನ್‌’ ಟ್ಯಾಂಕ್‌ ಸೇನೆಗೆ ಹಸ್ತಾಂತರ

ತಮಿಳುನಾಡು, ಕೇರಳದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ
Last Updated 12 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಫೆ. 14ರಂದು ಚೆನ್ನೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಅರ್ಜುನ್‌’ ಟ್ಯಾಂಕ್‌ ಅನ್ನು (ಎಂಕೆ–1ಎ) ಸೇನೆಗೆ ಹಸ್ತಾಂತರಿಸುವರು.

ತಮಿಳುನಾಡು ಹಾಗೂ ಕೇರಳದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಹಲವು ಯೋಜನೆಗಳನ್ನು ಉದ್ಘಾಟಿಸುವರು ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.

ಚೆನ್ನೈ ಮೆಟ್ರೊ ಪ್ರಾಜೆಕ್ಟ್‌, ಕೇರಳದಲ್ಲಿ ಪೆಟ್ರೊಕೆಮಿಕಲ್ ಕಾಂಪ್ಲೆಕ್ಸ್‌ನ ಉದ್ಘಾಟನೆ ನೆರವೇರಿಸುವರು.

ಡಿಆರ್‌ಡಿಒ ಅಂಗಸಂಸ್ಥೆ ‘ಕಂಬ್ಯಾಟ್‌ ವೆಹಿಕಲ್ಸ್‌ ರಿಸರ್ಚ್‌ ಆ್ಯಂಡ್ ಡೆವಲೆಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌’, 15 ಶೈಕ್ಷಣಿಕ ಸಂಸ್ಥೆಗಳು, 8 ಲ್ಯಾಬ್‌ಗಳು ಹಾಗೂ ಹಲವಾರು ಎಂಎಸ್‌ಎಂಇಗಳು ‘ಅರ್ಜುನ್‌’ ಯುದ್ಧ ಟ್ಯಾಂಕ್‌ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT