ಸೋಮವಾರ, ಸೆಪ್ಟೆಂಬರ್ 27, 2021
25 °C

ಉದ್ಯೋಗವಿಲ್ಲ, ಭಾನುವಾರ–ಸೋಮವಾರ ನಡುವಿನ ವ್ಯತ್ಯಾಸವೇ ಅಂತ್ಯ: ರಾಹುಲ್‌ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬಿಜೆಪಿ ಸರ್ಕಾರದ ‘ಅಭಿವೃದ್ಧಿ’ ಹೇಗಿದೆ ಎಂದರೆ ವಾರದ ರಜೆ ಮತ್ತು ಕೆಲಸದ ದಿನಗಳ ನಡುವಿನ ವ್ಯತ್ಯಾಸವೇ ಅಂತ್ಯವಾಗಿದೆ. ಉದ್ಯೋಗವೇ ಇಲ್ಲದಿದ್ದಾಗ ಭಾನುವಾರ ಮತ್ತು ಸೋಮವಾರ ಒಂದೇ ರೀತಿ ಇರುತ್ತದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ವಾಹನ ತಯಾರಿಕಾ ಕಂಪನಿ ಫೋರ್ಡ್‌ ಭಾರತದಲ್ಲಿ ವಾಹನ ತಯಾರಿಕೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಇದರಿಂದಾಗಿ 4,000 ಸಣ್ಣ ಸಂಸ್ಥೆಗಳು ಮುಚ್ಚಬಹುದು ಎಂಬುದಾಗಿ ಸಿಬ್ಬಂದಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಯೊಂದನ್ನು ರಾಹುಲ್‌ ಗಾಂಧಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಬಿಜೆಪಿ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿಯಲ್ಲಿ ಭಾನುವಾರ ಮತ್ತು ಸೋಮವಾರದ ನಡುವಿನ ಎಲ್ಲಾ ವ್ಯತ್ಯಾಸಗಳು ಅಂತ್ಯವಾಗಿದೆ. ಉದ್ಯೋಗವೇ ಇಲ್ಲದಿದ್ದಾಗ ಭಾನುವಾರವಾದರೇನು, ಸೋಮವಾರವಾದರೇನು?’ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು