ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸ್ವತ್ತುಗಳನ್ನು ಸರ್ಕಾರ ಮಾರಾಟ ಮಾಡುತ್ತಿರೋದು ನಾಚಿಕೆಗೇಡು: ರಾಹುಲ್ ಗಾಂಧಿ

Last Updated 9 ಸೆಪ್ಟೆಂಬರ್ 2020, 1:13 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ನಷ್ಟಗಳನ್ನು ತುಂಬಿಕೊಳ್ಳಲು ದೇಶದ ಸ್ವತ್ತುಗಳನ್ನು ಮೋದಿ ಸರ್ಕಾರ ಮಾರಾಟ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜೀವ ವಿಮಾ ನಿಗಮದ (ಎಲ್‌ಐಸಿ) ಬಂಡವಾಳ ಮಾರಾಟ ಕುರಿತ ವರದಿಗೆ ಸಂಬಂಧಿಸಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

ಮೋದಿ ಜೀ ಅವರು ‘ಸರ್ಕಾರಿ ಕಂಪನಿಗಳ ಮಾರಾಟ’ ಅಭಿಯಾನ ನಡೆಸುತ್ತಿದ್ದಾರೆ. ಅವರೇ ಮಾಡಿಕೊಂಡಿರುವ ಆರ್ಥಿಕ ಅವ್ಯವಸ್ಥೆ ಸರಿಪಡಿಸಲು ಸರ್ಕಾರದ ಆಸ್ತಿಗಳನ್ನು ಒಂದೊಂದಾಗಿ ಮಾರಾಟ ಮಾಡಲಾಗುತ್ತಿದೆ ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಎಲ್‌ಐಸಿಯನ್ನು ಮಾರಾಟ ಮಾಡುವುದು ಜನರ ಭವಿಷ್ಯ ಮತ್ತು ನಂಬಿಕೆಯನ್ನು ಬದಿಗಿಟ್ಟು ಮೋದಿ ಸರ್ಕಾರ ಮಾಡುತ್ತಿರುವ ನಾಚಿಕೆಗೇಡಿನ ಕೆಲಸವಾಗಿದೆ’ ಎಂದೂ ಅವರು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಎಲ್‌ಐಸಿಯಿಂದ ಸರ್ಕಾರವು ತನ್ನ ಪಾಲನ್ನು ಶೇ 25ರಷ್ಟು ಇಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT