ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅತಿದೊಡ್ಡ ಪಕ್ಷವಾಗಿರುವುದು ಎಐಎಂಐಎಂ ಶಾಸಕರಿಗೆ ಇಷ್ಟ ಇರಲಿಲ್ಲ: ತೇಜಸ್ವಿ

Last Updated 1 ಜುಲೈ 2022, 10:56 IST
ಅಕ್ಷರ ಗಾತ್ರ

ಪಟ್ನಾ: ‘ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿರುವುದು ಎಐಎಂಐಎಂ ಶಾಸಕರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಆ ಪಕ್ಷದ ನಾಲ್ವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹೇಳಿದ್ದಾರೆ.

2020ರ ವಿಧಾನಸಭಾ ಚುನಾವಣೆಯಲ್ಲಿ ಅಸಾದುದ್ದೀನ್‌ ಓವೈಸಿ ನೇತೃತ್ವದಎಐಎಂಐಎಂ ಪಕ್ಷದಿಂದಐವರು ಗೆದ್ದಿದ್ದರು. ಈ ಪೈಕಿ ಸೈಯದ್‌ ರುಕ್ನುದ್ದೀನ್‌ ಅಹ್ಮದ್‌, ಶಹನವಾಜ್‌ ಆಲಂ, ಮೊಹಮ್ಮದ್‌ ಇಝಾರ್‌ ಆಸ್ಫಿ ಮತ್ತು ಮೊಹಮ್ಮದ್‌ ಅಂಜಾರ್‌ ನಯೀಮಿ ಅವರು ಆರ್‌ಜೆಡಿ ಸೇರಿದ್ದಾರೆ. ಇದರಿಂದಾಗಿ ವಿಧಾನಸಭೆಯಲ್ಲಿ ಆರ್‌ಜೆಡಿ ಬಲ 80ಕ್ಕೆ ಏರಿಕೆಯಾಗಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಯು 77 ಶಾಸಕರ ಬಲ ಹೊಂದಿದೆ.

ಅಖ್ತರುಲ್‌ ಇಮಾನ್‌ ಅವರು ಸದ್ಯ ಎಐಎಂಐಎಂನಲ್ಲಿರುವ ಏಕೈಕ ಶಾಸಕ. ಅವರುಬಿಹಾರ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT