ಬುಧವಾರ, ಏಪ್ರಿಲ್ 21, 2021
33 °C
ನಕಲಿ ಚೆಕ್‌ಗಳ ಬಳಕೆ, ವಂಚಿಸಿದ ವ್ಯಕ್ತಿ ಬಂಧನ, ಖಾತೆ ಜಪ್ತಿ

ರಾಮಮಂದಿರ ಟ್ರಸ್ಟ್‌ ಬ್ಯಾಂಕ್‌ ಖಾತೆಯಿಂದ ₹6 ಲಕ್ಷ ಕಳವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಯೋಧ್ಯ: ನಕಲಿ ಚೆಕ್‌ಗಳನ್ನು ಬಳಸಿ ರಾಮಮಂದಿರ ಟ್ರಸ್ಟ್‌ ಬ್ಯಾಂಕ್ ಖಾತೆಯಿಂದ ₹6 ಲಕ್ಷ ಹಣವನ್ನು ಕಳವು ಮಾಡಿದ್ದ ವ್ಯಕ್ತಿಯೊಬ್ಬನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ, ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಎರಡು ನಕಲಿ ಚೆಕ್‌ಗಳ ಮೂಲಕ ಟ್ರಸ್ಟ್‌ ಖಾತೆಯಿಂದ ₹6 ಲಕ್ಷ ಹಣವನ್ನು ವರ್ಗಾಯಿಸಿಕೊಂಡು, ಮೂರನೇ ಚೆಕ್ ಮೂಲಕ ₹10 ಲಕ್ಷ ಹಣವನ್ನು ಕಳವು ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಈತ ಬ್ಯಾಂಕ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಟ್ರಸ್ಟ್‌ ಕಾರ್ಯದರ್ಶಿ ಮತ್ತು ವಿಎಚ್‌ಪಿ ಮುಖಂಡ ಚಂಪತ್ ರೈ ಅವರು ಈತನ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಹಣ ವರ್ಗಾವಣೆ ಮಾಡಿದ್ದ ಖಾತೆಯನ್ನು ಜಪ್ತಿ ಮಾಡಿದ್ದೇವೆ. ಟ್ರಸ್ಟ್ ಖಾತೆಯಿಂದ ಲಖನೌ ಮತ್ತು ಮುಂಬೈನಲ್ಲಿರುವ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಅಲ್ಲಿಗೆ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ‘ ಎಂದು ಅಯೋಧ್ಯೆಯ ಡಿಐಜಿ ದೀಪಕ್ ಕುಮಾರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಟ್ರಸ್ಟ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿರುವ ₹6 ಲಕ್ಷದಲ್ಲಿ ₹4 ಲಕ್ಷವನ್ನು ವಂಚನೆಯ ಹಿಂದಿರುವ ಆರೋಪಿಗಳು ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿಕೊಂಡಿದ್ದಾರೆ. ಉಳಿದ ₹2 ಲಕ್ಷ ಆ ಖಾತೆಯಲ್ಲೇ ಇದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು