ಬುಧವಾರ, ಮೇ 12, 2021
18 °C

ವಿರಾಟ್‌ ಸಂರಕ್ಷಣೆ: ಖಾಸಗಿ ಸಂಸ್ಥೆಯ ಅರ್ಜಿವಜಾ ಮಾಡಿದ ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸೇವೆ ಸ್ಥಗಿತಗೊಳಿಸಿರುವ ಭಾರತದ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್‌ ವಿರಾಟ್‌ ಅನ್ನು ಸಂಗ್ರಹಾಲಯದಲ್ಲಿ ಇಟ್ಟು ಸಂರಕ್ಷಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾ ಮಾಡಿತು.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ವಿ. ರಾಮಸುಬ್ರಹ್ಮಣಿಯನ್,  ಎ.ಎಸ್.ಬೋಪಣ್ಣ ಅವರಿದ್ದ ಪೀಠವು, ‘ಈ  ಸಂಬಂಧ ಖಾಸಗಿ ಸಂಸ್ಥೆಯು ಸಲ್ಲಿಸಿದ್ದ ಮನವಿಯನ್ನು ಈಗಾಗಲೇ ರಕ್ಷಣಾ ಇಲಾಖೆಯು ತಿರಸ್ಕರಿಸಿದೆ’ ಎಂಬ ಅಂಶವನ್ನು ಪರಿಗಣಿಸಿತು.

ನೀವು ಹೀಗೇ ಮಾಡಲಾಗದು. ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್‌ ತಿಳಿಸಿದ್ದು, ಅದರಂತೆ ಮಾಡಿದ್ದೀರಿ. ರಕ್ಷಣಾ ಇಲಾಖೆ ಅದನ್ನು ತಳ್ಳಿಹಾಕಿದೆ. ಮತ್ತೆ ಅದನ್ನು ಪ್ರಶ್ನಿಸಲಾಗದು ಎಂದು ಪೀಠವು ಹೇಳಿತು.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ ನಡೆಯಿತು. ಖಾಸಗಿ ಸಂಸ್ಥೆ ಎನ್ವಿಟೆಕ್‌ ಮರಿನ್‌ ಪ್ರತಿನಿಧಿಸಿದ್ದ ರೂಪಾಲಿ ಶರ್ಮಾ, ಇದು ರಾಷ್ಟ್ರೀಯ ಆಸ್ತಿ. ರಕ್ಷಿಸಿಡುವುದು ಅಗತ್ಯ ಎಂದು ವಾದಿಸಿದ್ದರು. ಇದನ್ನು ಪೀಠ ನಿರಾಕರಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು