ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಬಳಿ ಒಯ್ಯಿರಿ: ಉಗ್ರನ ಮನವಿ

ಕಾಶ್ಮೀರದ ಬಗ್ಗೆ ಸುಳ್ಳು ಮಾಹಿತಿ; ಪಾಕ್‌ ವರ್ತನೆಗೆ ಅಸಮಾಧಾನ
Last Updated 29 ಸೆಪ್ಟೆಂಬರ್ 2021, 17:45 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ಉರಿವಲಯದಲ್ಲಿ ಭಾರತೀಯ ಸೇನಾಪಡೆಯು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸೆರೆಸಿಕ್ಕ ಹದಿವಯಸ್ಸಿನ ಭಯೋತ್ಪಾದಕನು, ತಾಯಿಯ ಬಳಿಗೆ ವಾಪಸ್‌ ಕರೆದೊಯ್ಯುವಂತೆ ತನ್ನ ನಿರ್ವಾಹಕರಿಗೆ ಮನವಿ ಮಾಡಿದ್ದಾನೆ.

‘ನನ್ನನ್ನು ಹೇಗೆ ಇಲ್ಲಿಗೆ (ಭಾರತಕ್ಕೆ) ಕಳುಹಿಸಿದ್ದರೋ ಅದೇ ರೀತಿ ವಾಪಸ್‌ ನನ್ನ ತಾಯಿಯ ಬಳಿಗೆ ಕರೆದೊಯ್ಯಬೇಕು ಎಂದು ಲಷ್ಕರ್‌ ಎ ತಯಬಾ (ಎಲ್‌ಇಟಿ) ಏರಿಯಾ ಕಮಾಂಡರ್‌, ಐಎಸ್‌ಐ ಹಾಗೂ ಪಾಕಿಸ್ತಾನದ ಸೇನೆಗೆ ಮನವಿ ಮಾಡುತ್ತಿದ್ದೇನೆ’ ಎಂದು ಭಯೋತ್ಪಾದಕ ಅಲಿ ಬಾಬರ್‌ ಪಾತ್ರಾ, ಪಾಕಿಸ್ತಾನಕ್ಕೆ ಮನವಿ ಮಾಡಿರುವ ವಿಡಿಯೊ ಸಂದೇಶವನ್ನು ಬುಧವಾರ ಭಾರತೀಯ ಸೇನೆಯು ಬಿಡುಗಡೆ ಮಾಡಿದೆ.

ಕಾಶ್ಮೀರ ಪರಿಸ್ಥಿತಿ ಬಗ್ಗೆ ಪಾಕಿಸ್ತಾನದ ಸೇನೆ, ಎಲ್‌ಇಟಿ ಹಾಗೂ ಐಎಸ್‌ಐ ಸುಳ್ಳು ಮಾಹಿತಿಯನ್ನು ಹರಡುತ್ತಿರುವುದಾಗಿ ಬಾಬರ್‌ ಹೇಳಿರುವುದು ಈ ವಿಡಿಯೊದಲ್ಲಿದೆ.

ಹಣಕಾಸಿನ ಸಮಸ್ಯೆಯಿಂದಾಗಿ ಶಾಲೆಯನ್ನು ತೊರೆದು ಭಯೋತ್ಪಾದಕರ ಸಹವಾಸಕ್ಕೆ ಬಂದಿದ್ದಾಗಿ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT