ಬುಧವಾರ, ಮಾರ್ಚ್ 29, 2023
32 °C

ಉಪಹಾರ್ ಚಿತ್ರಮಂದಿರದ ಅಗ್ನಿ ಅವಘಡ ಪ್ರಕರಣ: ಅನ್ಸಾಲ್ ಸಹೋದರರಿಗೆ 7 ವರ್ಷ ಜೈಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 59 ಮಂದಿ ಸಾವಿಗೆ ಕಾರಣವಾಗಿದ್ದ 1997ರ ದೆಹಲಿಯ ಉಪಹಾರ್ ಚಿತ್ರಮಂದಿರದ ಅಗ್ನಿ ಅವಘಡ ಪ್ರಕರಣದಲ್ಲಿ ಸಾಕ್ಷಿಗಳನ್ನು ತಿರುಚಿದ ಆರೋಪದಡಿ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಸಹೋದರರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಸಾಕ್ಷಿ ತಿರುಚಿದ ಆರೋಪದಡಿ ಇಬ್ಬರೂ ದೋಷಿಗಳೆಂದು ಸಾಬೀತಾಗಿದೆ ಎಂದು ಕೋರ್ಟ್ ಕಳೆದ ತಿಂಗಳು ಹೇಳಿತ್ತು.

ಬೃಹತ್ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಅನ್ಸಾಲ್ ಸಹೋದರರಿಗೆ ₹ 2.25 ಕೋಟಿ ದಂಡವನ್ನೂ ವಿಧಿಸಲಾಗಿದೆ.

ಜುಲೈ 13, 1997ರಂದು ಹಿಂದಿಯ ‘ಬಾರ್ಡರ್’ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅವಘಡದಲ್ಲಿ 59 ಮಂದಿ ಜೀವ ಕಳೆದುಕೊಂಡಿದ್ದರು.

ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಸ್ವರೂಪ್ ಪನ್ವಾರ್ ಮತ್ತು ಧರಮ್‌ವೀರ್ ಮಲ್ಹೋತ್ರಾ ವಿಚಾರಣೆ ಹಂತದಲ್ಲೇ ಸಾವಿಗೀಡಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು