ಶನಿವಾರ, ಅಕ್ಟೋಬರ್ 24, 2020
25 °C

ನಾನಾಜಿ ದೇಶ‌ಮುಖ್ ಸ್ಮರಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾಮಾಜಿಕ ಹೋರಾಟಗಾರ ನಾನಾಜಿ ದೇಶ‌ಮುಖ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಗೌರವ ಸಲ್ಲಿಸಿದ್ದಾರೆ. ನಾನಾಜಿ ದೇಶ‌ಮುಖ್ ಅವರಿಗೆ ಗ್ರಾಮೀಣಾಭಿವೃದ್ಧಿ ಮೇಲಿದ್ದ ಆಸಕ್ತಿ, ಉತ್ಸಾಹವನ್ನು ಅವರು ಸ್ಮರಿಸಿದ್ದಾರೆ.

ನಾನಾಜಿ ದೇಶ‌ಮುಖ್‌ ಅವರು 1916ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು.

‘ನಾನಾಜಿ ಅವರು ತಮ್ಮ ಜೀವನವನ್ನು ದೇಶದ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಶೋಷಿತರ ಬಗ್ಗೆ ಅವರಿಗಿದ್ದ ಸಹಾನುಭೂತಿ ಮತ್ತು ಗ್ರಾಮೀಣಾಭಿವೃದ್ಧಿಯ ಬಗೆಗಿನ ಉತ್ಸಾಹ ಜನರಲ್ಲಿ ಸದಾ ಪ್ರೇರಣೆಯಾಗಿ ಉಳಿದಿರುತ್ತದೆ ಎಂದು ನಾಯ್ಡು ಅವರು ವರ್ಣಿಸಿದ್ದಾರೆ’ ಎಂದು  ಉಪರಾಷ್ಟ್ರಪತಿ ಸಚಿವಾಲಯ ಟ್ವೀಟ್‌ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು