ಮಂಗಳವಾರ, ಸೆಪ್ಟೆಂಬರ್ 28, 2021
25 °C

ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೋನಾಲ್‌ ಶುಕ್ಲಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಿಳಾ ಹಕ್ಕುಗಳ ಖ್ಯಾತ ಕಾರ್ಯಕರ್ತೆ ಸೋನಾಲ್‌ ಶುಕ್ಲಾ(80) ಅವರು ಗುರುವಾರ ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾದರು.

ಶುಕ್ಲಾ ಅವರು ‘ವಾಚಾ ಚಾರಿಟೇಬಲ್‌ ಟ್ರಸ್ಟ್‌’ನ ಸಂಸ್ಥಾಪಕರಾಗಿದ್ದರು ಮತ್ತು ಮ್ಯಾನೇಜಿಂಗ್‌ ಟ್ರಸ್ಟಿಯೂ ಆಗಿದ್ದರು. ಕಳೆದ ನಾಲ್ಕು ದಶಕಗಳಿಂದ ಶುಕ್ಲಾ ಅವರು ಬಾಲಕಿಯರು ಮತ್ತು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿದ್ದರು.

1987ರಲ್ಲಿ ಗ್ರಂಥಾಲಯ ಮತ್ತು ಮಹಿಳೆಯರ ಸಂಪನ್ಮೂಲ ಕೇಂದ್ರವನ್ನಾಗಿ ‘ವಾಚಾ’ ಆರಂಭಿಸಲಾಗಿತ್ತು. ಇದು ಮಹಿಳೆಯರ ಮೊದಲ ಗ್ರಂಥಾಲಯವಾಗಿತ್ತು. ಈ ಗ್ರಂಥಾಲಯದಲ್ಲಿ ಸುಮಾರು ಮೂರು ಸಾವಿರ ಪುಸ್ತಕಗಳ ಸಂಗ್ರಹವಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮಹಿಳೆಯರ ಬಗ್ಗೆ ಎರಡು ಸಂಗೀತ ಅಲ್ಬಮ್‌ಗಳು ಮತ್ತು ಎರಡು ಸಾಕ್ಷ್ಯಚಿತ್ರಗಳನ್ನು ‘ವಾಚಾ’ ಸಂಸ್ಥೆಯು 1991ರಲ್ಲಿ ನಿರ್ಮಿಸಿತ್ತು.

ಕಾಲೇಜು ಶಿಕ್ಷಕಿಯಾಗಿದ್ದ ಸೋನಾಲ್‌ ಶುಕ್ಲಾ ಅವರು, ಮುಂಬೈನ ಸ್ವಚ್ಛತಾ ಕಾರ್ಮಿಕರು ಮತ್ತು ಮೀನುಗಾರರಿಗೆ ಸಂಬಂಧಿಸಿದ ಯೋಜನೆಗಳ ಉಸ್ತುವಾರಿಯನ್ನು ಸಹ ವಹಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.