ಭಾರತ ಮೂಲದ ಅಮೆರಿಕ ಉದ್ಯಮಿಯ ಬಂಧನ

7
ಮಾಜಿ ಪತ್ನಿ ಹತ್ಯೆಗೆ ಸುಪಾರಿ ನೀಡಿದ ಆರೋಪ

ಭಾರತ ಮೂಲದ ಅಮೆರಿಕ ಉದ್ಯಮಿಯ ಬಂಧನ

Published:
Updated:
Prajavani

ವಾಷಿಂಗ್ಟನ್‌: ಮಾಜಿ ಪತ್ನಿಯ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಭಾರತ ಮೂಲದ ಅಮೆರಿಕದ ಉದ್ಯಮಿ ನರ್ಸಾನ್‌ ಲಿಂಗಾಲ ಹಾಗೂ ಆಕೆಯ ಪ್ರಿಯತಮೆ ಸಂಧ್ಯಾ ರೆಡ್ಡಿಯನ್ನು ಬಂಧಿಸಲಾಗಿದೆ.

ಪತ್ನಿಯ ಹತ್ಯೆಗೆ ಸುಪಾರಿ ನೀಡುವ ಸಂಬಂಧ ಪರಿಚಿತರ ಮೂಲಕ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವಿಷಯ ತಿಳಿದ ತಕ್ಷಣ ಪೊಲೀಸರೊಬ್ಬರು ಮಫ್ತಿಯಲ್ಲಿ ಲಿಂಗಾಲ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಮಾಜಿ ಪತ್ನಿಯನ್ನು ಹತ್ಯೆಮಾಡಿದರೆ  5 ಸಾವಿರ ಡಾಲರ್‌ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದರು. ಅದರಂತೆ, ಮುಂಗಡವಾಗಿ 1 ಸಾವಿರ ಡಾಲರ್‌ ನೀಡಲು ಮುಂದಾದ ವೇಳೆ ಅಧಿಕಾರಿಗಳು ಲಿಂಗಾಲ ಮತ್ತು ರೆಡ್ಡಿಯನ್ನು ಬಂಧಿಸಿದ್ದಾರೆ.

ನ್ಯಾಯಾಲಯದಲ್ಲಿ ಇಬ್ಬರ ವಿರುದ್ಧ ಆರೋಪ ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಹಾಗೂ 2.5ಲಕ್ಷ ಡಾಲರ್‌ ದಂಡ ತೆರಬೇಕಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !