ಕೊಲೊಂಬೊ: ಶ್ರೀಲಂಕಾ ರಾಜಧಾನಿ ಕೊಲೊಂಬೊದ ಚರ್ಚ್ ಮತ್ತು ಹೋಟೆಲ್ಗಳ ಮೇಲಿನ ದಾಳಿಯ ಹೊಣೆಗಾರಿಕೆಯನ್ನು ಉಗ್ರ ಸಂಘಟನೆ ಐಎಸ್ಐಎಸ್ (ISIS) ಹೊತ್ತಿದೆ.

ಐಎಸ್ಐಎಸ್ ಸಂಘಟನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಸುದ್ದಿ ಪ್ರಸಾರ ಮಾಡುವ ‘ಅಮಾಕ್ ನ್ಯೂಸ್ ಏಜನ್ಸಿ’ ಈ ಕುರಿತು ವರದಿ ಮಾಡಿದೆ. ಆದರೆ, ದಾಳಿಗೆ ಸಂಬಂಧಿಸಿದಂತೆ ಯಾವುದೇ ವಿವರಣೆಯಾಗಲಿ, ಸಾಕ್ಷ್ಯಾಧಾರಗಳನ್ನಾಗಲಿ ಸಂಘಟನೆ ನೀಡಿಲ್ಲ. ಅಮಾಕ್ನ ವರದಿ ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಪ್ರಕಟಿಸಿವೆ.

ಇದಕ್ಕೂ ಮೊದಲು ಶ್ರೀಲಂಕಾದ ಸಂಸತ್ನಲ್ಲಿ ಮಾತನಾಡಿದ್ದ ಅಲ್ಲಿನ ರಕ್ಷಣಾ ಇಲಾಖೆಯ ರಾಜ್ಯ ಸಚಿವ, ‘ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನ ಮಸೀದಿಗಳಲ್ಲಿ ನಡೆದಿದ್ದ ಗುಂಡಿನ ದಾಳಿಗೆ ಪ್ರತಿಕಾರವಾಗಿ ಶ್ರೀಲಂಕಾದ ಚರ್ಚ್, ಹೋಟೆಲ್ಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಇದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ,’ ಎಂದು ಹೇಳಿದ್ದರು.

ಕೊಲೊಂಬೊದ ಚರ್ಚ್ ಮತ್ತು ಹೋಟೆಲ್ಗಳಲ್ಲಿ ಭಾನುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ 310 ಮಂದಿ ಹತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.