ಮದುವೆಗೆ ಒಪ್ಪದಿದ್ದಕ್ಕೆ ಯುವತಿಯ ಮನೆಗೆ ನುಗ್ಗಿ ಗಲಾಟೆ

7
ಅಶ್ಲೀಲ ವಿಡಿಯೊ ಕಳುಹಿಸುತ್ತಿದ್ದ ಆರೋಪಿ; ದೂರು ದಾಖಲಾಗುತ್ತಿದ್ದಂತೆ ಪರಾರಿ

ಮದುವೆಗೆ ಒಪ್ಪದಿದ್ದಕ್ಕೆ ಯುವತಿಯ ಮನೆಗೆ ನುಗ್ಗಿ ಗಲಾಟೆ

Published:
Updated:
Deccan Herald

ಬೆಂಗಳೂರು: ‘ಮದುವೆಯಾಗಲು ನಿರಾಕರಿಸಿದ್ದಕ್ಕೆ ಸಹಚರರೊಂದಿಗೆ ಮನೆಗೆ ನುಗ್ಗಿದ್ದ ಭರತ್‌ ರಾಜ್, ನನ್ನ ಮೇಲೆ ಹಲ್ಲೆ ನಡೆಸಿ ಮಾರಕಾಸ್ತ್ರಗಳಿಂದ ಕಾರಿನ ಗಾಜು ಒಡೆದು ಪರಾರಿಯಾಗಿದ್ದಾನೆ’ ಎಂದು ಆರೋಪಿಸಿ ಯುವತಿಯೊಬ್ಬರು ಜೀವನ್‌ ಬಿಮಾನಗರ ಠಾಣೆಗೆ ದೂರು ನೀಡಿದ್ದಾರೆ.

ಜೆ.ಪಿ.ನಗರ 3ನೇ ಹಂತದ 2ನೇ ಮುಖ್ಯರಸ್ತೆಯ ನಿವಾಸಿಯಾದ ಭರತ್‌ ರಾಜ್, ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

‘ಆರೋಪಿ, ಚಾಮರಾಜಪೇಟೆಯಲ್ಲಿ ಉದ್ಯೋಗಸ್ಥ ಮಹಿಳೆಯರ ಪೇಯಿಂಗ್‌ ಗೆಸ್ಟ್‌ ಕಟ್ಟಡ ನಡೆಸುತ್ತಿದ್ದ. ಈ ಹಿಂದೆ ಆತ, ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ ಎನ್ನಲಾಗಿದೆ. ಆತನ ಕಾಟ ತಾಳಲಾರದೇ ಪತ್ನಿಯರು ದೂರವಾಗಿದ್ದಾರೆ ಎಂಬ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಯುವತಿಗೂ ಆರೋಪಿಗೂ ಕೆಲವು ವರ್ಷಗಳ ಹಿಂದೆ ಪರಿಚಯವಾಗಿತ್ತು. ಆರೋಪಿ ಕೆಟ್ಟದಾಗಿ ನಡೆದುಕೊಳ್ಳಲು ಆರಂಭಿಸಿದ್ದ. ಆತನ ನಡವಳಿಕೆಯಿಂದ ಬೇಸತ್ತ ಯುವತಿ, ಮಾತನಾಡಿಸುವುದನ್ನು ಬಿಟ್ಟಿದ್ದರು. ಅಂದಿನಿಂದಲೇ ಆತ, ಯುವತಿಗೆ ಕಿರುಕುಳ ನೀಡಲಾರಂಭಿಸಿದ್ದ’ ಎಂದರು.

‘ಮದುವೆಯಾಗುವಂತೆ ಪೀಡಿಸಲಾರಂಭಿಸಿದ್ದ ಆರೋಪಿ, ಯುವತಿಯ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಯುವತಿಯ ಮೊಬೈಲ್‌ಗೆ ಅಶ್ಲೀಲ ವಿಡಿಯೊ ಹಾಗೂ ಸಂದೇಶಗಳನ್ನು ಕಳುಹಿಸಿ ಕಾಟ ಕೊಡುತ್ತಿದ್ದ’.

‘ಸೆಪ್ಟೆಂಬರ್ 22ರಂದು ಯುವತಿ ಕಾರಿನಲ್ಲಿ ಹೊರಟಿದ್ದಾಗ ಅಡ್ಡಗಟ್ಟಿದ್ದ ಭರತ್‌ ರಾಜ್, ಹಲ್ಲೆ ಸಹ ಮಾಡಿದ್ದ. ಆ ಸಂಬಂಧ ಯುವತಿ, ಇಂದಿರಾನಗರ ಠಾಣೆಗೆ ದೂರು ನೀಡಿದ್ದರು. ದೂರು ಹಿಂಪಡೆಯುವಂತೆ ಪುನಃ ಪೀಡಿಸಲಾರಂಭಿಸಿದ್ದ ಆರೋಪಿ, ತನ್ನ ಸಹಚರರ ಜೊತೆಗೆ ಸೆ. 26ರಂದು ರಾತ್ರಿ 11.20 ಗಂಟೆ ಸುಮಾರಿಗೆ ಯುವತಿಯ ಮನೆಗೆ ನುಗ್ಗಿದ್ದ. ಮಾರಕಾಸ್ತ್ರಗಳಿಂದ ಕಾರಿನ ಗಾಜುಗಳನ್ನು ಒಡೆದು ಹಾಕಿ ಯುವತಿಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ವಿವರಿಸಿದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 2

  Sad
 • 0

  Frustrated
 • 6

  Angry

Comments:

0 comments

Write the first review for this !