ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಗಾಸ್‌ ಯಾತ್ರಾದಿಂದ ಭಾರತ ದರ್ಶನ

Last Updated 9 ಜುಲೈ 2021, 14:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸೋದ್ಯಮ ಕ್ಷೇತ್ರದಲ್ಲಿ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯು ಪ್ರವಾಸಿಗರಿಗಾಗಿ ಭಾರತ ದರ್ಶನ ಕಾರ್ಯಕ್ರಮ ರೂಪಿಸಿದೆ.

‘ಪ್ರವಾಸಿಗರನ್ನು ಸುಲಭವಾಗಿ ಹಾಗೂ ವಿಶೇಷ ರಿಯಾಯಿತಿಯೊಂದಿಗೆ ಕಾಶಿ, ಗಯಾ, ಚಾರಧಾಮ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರ, ಸಿಕ್ಕಿಂ, ಡಾರ್ಜಿಲಿಂಗ್‌, ವೈಷ್ಣೋದೇವಿ ಹೀಗೆ ಅನೇಕ ಪ್ರಸಿದ್ಧ ಹಾಗೂ ಮನಮೋಹಕ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಪ್ರವಾಸಿಗರು ತಾವು ಇಚ್ಛಿಸಿದ ದಿನಗಳಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಮಾಡಬಹುದು’ ಎಂದು ಸಂಸ್ಥೆಯ ಸಂಸ್ಥಾಪಕ ಕೆ.ನಾಗರಾಜ ಅಡಿಗ ತಿಳಿಸಿದ್ದಾರೆ.

‘ಕಾಶ್ಮೀರ, ಶಿಮ್ಲಾ, ಮನಾಲಿ, ನೈನಿತಾಲ್‌ ಹಾಗೂ ಅಂಡಮಾನ್‌ ಪ್ರವಾಸ ಕೈಗೊಳ್ಳುವವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಧುಚಂದ್ರಕ್ಕೆ ಹೋಗಲು ಸಿದ್ಧವಿರುವ ನವಜೋಡಿಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ‍ಪ್ಯಾಕೇಜ್‌ ರೂಪಿಸಲಾಗಿದೆ. ಸಂಸ್ಥೆಯು ನೇಪಾಳ, ಭೂತಾನ್‌, ಮುಕ್ತಿನಾಥ, ಲಡಾಖ್‌ ಹಾಗೂ ಇತರ 40 ಸ್ಥಳಗಳಿಗೆ ಪ್ರವಾಸ ಆಯೋಜಿಸಿದೆ. 5ರಿಂದ 10ದಿನಗಳ ಈ ಪ್ರವಾಸಕ್ಕೆ ಈಗಾಗಲೇ ದಿನಾಂಕವನ್ನೂ ನಿಗದಿಪಡಿಸಲಾಗಿದೆ. 9 ದಿನಗಳ ಕಾಶಿ–ಗಯಾ ಯಾತ್ರೆಯೂ ನಿಗದಿಯಾಗಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು. 12 ತಿಂಗಳ ಮಾಸಿಕ ಯೋಜನೆಯನ್ನೂ ಜಾರಿಗೊಳಿಸಲಾಗಿದ್ದು, ಪ್ರವಾಸಿಗರು ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗೆ www.adigasyatra.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸಂಪರ್ಕಕ್ಕೆ: 7022259002 (ಹುಬ್ಬಳ್ಳಿ), 7022259008 (ಬಸವನಗುಡಿ), 7022259003 (ಮಲ್ಲೇಶ್ವರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT