ಭಾನುವಾರ, ಡಿಸೆಂಬರ್ 4, 2022
21 °C

ಎಲ್‌ಜಿ ಸಕ್ಸೇನಾ ಪರ ದೆಹಲಿ ಹೈಕೋರ್ಟ್ ಆದೇಶ ಒಪ್ಪಲಾಗದು : ಎಎಪಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ವಿರುದ್ಧ ಮತ್ತಷ್ಟು ಆರೋಪ ಮಾಡದಂತೆ ಮತ್ತು ಮಾನಹಾನಿಕರ ಹೇಳಿಕೆ, ವಿಡಿಯೊ ಹಾಗೂ ಟ್ವೀಟ್‌ಗಳನ್ನು ಹಂಚಿಕೊಳ್ಳದಂತೆ ದೆಹಲಿ ಹೈಕೋರ್ಟ್‌ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಸಂಪೂರ್ಣ ಒಪ್ಪಲಾಗದು ಎಂದು ಎಎ‍ಪಿ ಮಂಗಳವಾರ ಹೇಳಿದೆ.

ದೆಹಲಿ ಹೈಕೋರ್ಟ್‌ ತೀರ್ಪಿಗೆ ಎಎಪಿ ಹಿರಿಯ ನಾಯಕ ದುರ್ಗೇಶ್‌ ಪಾಠಕ್‌, ‘ಈ ಆದೇಶವನ್ನು ನಾವು ಸಂಪೂರ್ಣ ಒಪ್ಪುವುದಿಲ್ಲ. ಇದನ್ನು ವಿನಮ್ರವಾಗಿಯೇ ಹೇಳುತ್ತಿದ್ದೇವೆ. ವಕೀಲರೊಂದಿಗೆ ಸಮಾಲೋಚಿಸಿ, ನ್ಯಾಯಾಲಯದ ಈ ಆದೇಶವನ್ನು ಅಧ್ಯಯನ ಮಾಡಲಾಗುವುದು. ಇದರಲ್ಲಿ ಮುಂದಿನ ಹೆಜ್ಜೆಯ ಬಗ್ಗೆಯೂ ನಿರ್ಧರಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು