ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಂಗಾಲೇಶ್ವರ ಶ್ರೀ ಹೋರಾಟ ತಡೆದಿಲ್ಲ: ಸಚಿವ ಸಿ.ಸಿ.ಪಾಟೀಲ ಸ್ಪಷ್ಟನೆ

Last Updated 27 ಏಪ್ರಿಲ್ 2022, 17:51 IST
ಅಕ್ಷರ ಗಾತ್ರ

ನರಗುಂದ: ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಸ್ವತಂತ್ರರಾಗಿದ್ದಾರೆ. ಆದ್ದರಿಂದ ದಿಂಗಾಲೇಶ್ವರ ಶ್ರೀಗಳನ್ನು ನರಗುಂದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಡೆದಿರಬಹುದು. ಆದರೆ ನಾನು ಯಾವುದೇ ರೀತಿಯ ಪ್ರಭಾವ ಬಳಸಿ ಪೊಲೀಸರಿಂದ ದಿಂಗಾಲೇಶ್ವರ ಶ್ರೀ ಹೋರಾಟವನ್ನು ತಡೆದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಗದಗ ತೋಂಟದಾರ್ಯ ಮಠಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂ.ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥವಾಗಿ ಪ್ರತಿವರ್ಷ ಭಾವೈಕ್ಯ ದಿನಾಚರಣೆ ಆಚರಿಸುವುದಾಗಿ ಹೇಳಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ದಿಂಗಾಲೇಶ್ವರ ಶ್ರೀ ಪರ್ಸೆಂಟೆಜ್ ಸರ್ಕಾರ ಎಂದು ಆರೋಪ ಮಾಡಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಶಿರಹಟ್ಟಿ ಮಠಕ್ಕೆ ಅನುದಾನ ಬಿಡುಗಡೆಯಾಗದೆ ಇರುವುದಾಗಲಿ, ಐಆರ್‌ಡಿಎಫ್ ಇಲಾಖೆ ಅಧಿಕಾರಿಗಳು ಕಮಿಷನ್ ಕೇಳಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದರೆ ನಾನೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ತನಿಖೆಗೆ ಆದೇಶಿಸುತ್ತಿದ್ದೆ.ಬಾಕಿ ಇರುವ ಅನುದಾನವನ್ನು ಶ್ರೀಮಠಕ್ಕೆ ಕೊಡಿಸುವ ಕೆಲಸ ಮಾಡುತ್ತಿದ್ದೆ’ ಎಂದರು.

ಕ್ಷಮೆ ಕೇಳುವುದಿಲ್ಲ: ಸರ್ಕಾರದ ನಿಯಮಾನುಸಾರ ಶೇ 26ರಷ್ಟು ಅನುದಾನ ಅಧಿಕೃತವಾಗಿ ಕಡಿತಗೊಳ್ಳುತ್ತದೆ. ಇದನ್ನೇ ಪರ್ಸೆಂಟೆಜ್ ರೂಪದಲ್ಲಿ ಶ್ರೀಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಅಕ್ಷಮ್ಯ ಅಪರಾಧ. ದಿಂಗಾಲೇಶ್ವರ ಶ್ರೀಗಳ ಪೂರ್ವಾಶ್ರಮವೆಂದರೆ ಶಿರಹಟ್ಟಿ ಮಠಕ್ಕೆ ನೇಮಕಗೊಳ್ಳುವ ಮೊದಲಿನ ಆಶ್ರಮದ ಬಗ್ಗೆ ಮಾತನಾಡಿದ್ದೇನೆ. ಯಾರೊಬ್ಬರ ತೇಜೋವಧೆ ಮಾಡಿಲ್ಲ. ಶ್ರೀಗಳ ಮೇಲಿದ್ದ ಮೊದಲಿನ ಕೇಸ್‍ಗಳನ್ನು ಮಾತ್ರ ನೆನಪಿಸಿದ್ದೇನೆ. ಆದ್ದರಿಂದ ನಾನು ಯಾವುದೇ ಕಾರಣಕ್ಕೂ
ಅವರಲ್ಲಿ ಕ್ಷಮೆ ಕೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ವಿ.ವಿ.ಕಪ್ಪತ್ತನವರ, ಅನಿಲ್‌ ಮೆಣಸಿಣಕಾಯಿ, ರಾಜು ಕುರಡಗಿ, ಫಕೀರೇಶ ರಟ್ಟಿಹಳ್ಳಿ, ರಾಮಣ್ಣ ಡಂಬಳ, ತಿಪ್ಪಣ್ಣ, ವಿ.ಎಫ್.ಅಣ್ಣಿಗೇರಿ, ಎಸ್.ವಿ.ಮೊರಬದ, ತಿಮ್ಮರಡ್ಡಿ ಮರಡ್ಡಿ, ಪ್ರವೀಣಗೌಡ ಪಾಟೀಲ, ಪ್ರಕಾಶ ತಿರಕನಗೌಡ್ರ, ಉಮೇಶಗೌಡ ಪಾಟೀಲ,ಮರಡ್ಡಿ, ಪ್ರವೀಣಗೌಡ ಪಾಟೀಲ, ಪ್ರಕಾಶ ತಿರಕನಗೌಡ್ರ, ಉಮೇಶಗೌಡ ಪಾಟೀಲ ಇದ್ದರು.

ಪೆಂಡಾಲ್ ವ್ಯವಸ್ಥೆ

ದಿಂಗಾಲೇಶ್ವರ ಶ್ರೀಗಳ ಧರಣಿ ಅಂಗವಾಗಿ ಸಚಿವ ಸಿ.ಸಿ.ಪಾಟೀಲರ ಮನೆಯ ಪ್ರವೇಶ ದ್ವಾರದಲ್ಲಿ ಬುಧವಾರ ಪೆಂಡಾಲ್ ಹಾಕಿ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಬೆಳಿಗ್ಗೆಯಿಂದ ನೂರಾರು ಜನ ಕಾರ್ಯಕರ್ತರು, ಮತಕ್ಷೇತ್ರದ ಬಿಜೆಪಿ ಮುಖಂಡರು ನೀರಿಕ್ಷೆಗೂ ಮೀರಿ ಸಚಿವರ ಮನೆಗೆ ಬಂದಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಶ್ರೀಗಳನ್ನು ಕಲಕೇರಿ ಚೆಕ್‍ಪೋಸ್ಟ್ ಬಳಿ ತಡೆದು, ಮರಳಿ ಕಳಿಸಿದ್ದರಿಂದ ಧರಣಿ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT