ಮೈಸೂರು: ‘ಪರಿಶಿಷ್ಟರ ಒಳಮೀಸಲಾತಿ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು, ಇಲ್ಲದೆ ಕೈಗೊಂಡ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’ ಎಂದು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದ ಶೆಟ್ಟಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಮತಗಳಿಕೆಗಾಗಿ ಒಲೈಸಲು ಸರ್ಕಾರ ಮುಸ್ಲಿಂರ ಶೇ 4 ಮೀಸಲಾತಿಯನ್ನು ವಿಭಜಿಸಿ ಒಕ್ಕಲಿಗ, ಲಿಂಗಾಯತ ವರ್ಗಕ್ಕೆ ನೀಡಿದೆ. ಶೇ 2ರಷ್ಟಿರುವ ಬ್ರಾಹ್ಮಣ, ಆರ್ಯವೈಶ್ಯ ಸಮುದಾಯಕ್ಕೆ ಶೇ 10 ಆರ್ಥಿಕ ಮೀಸಲಾತಿ ನೀಡಲಾಗಿದೆ’ ಎಂದು ಟೀಕಿಸಿದರು.
‘197 ಜಾತಿಗಳಿರುವ ಕಾಯಕ ಸಮಾಜದ ಹಿಂದುಳಿದ ಸಮುದಾಯಗಳ ಮೀಸಲಾತಿಯನ್ನು ಶೇ 27ಕ್ಕೆ ಏರಿಸಬೇಕು. ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆ ಮನ್ನಿಸದೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಈ ಬಗ್ಗೆ 27ರಂದು ಕೆ.ಆರ್.ನಗರದಿಂದ ‘ಮನೆ ಮನೆ ಜಾಗೃತಿ’ ನಡೆಸಲಾಗುವುದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.