ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿ

160ನೇ ಜಯಂತಿ ಉತ್ಸವ ಇಂದು
Last Updated 9 ಜನವರಿ 2021, 20:40 IST
ಅಕ್ಷರ ಗಾತ್ರ

18ನೇ ಶತಮಾನದ ಅಂತ್ಯದಲ್ಲಿ ವಿಧವಾ ವಿವಾಹದಂಥ ಸಾಮಾಜಿಕ ಬದಲಾವಣೆಗೆ ಮುಂದಾದವರು ಶಿರಸಂಗಿ ಲಿಂಗರಾಜ ದೇಸಾಯಿ ಅವರು.

ಅವರ ದೂರದೃಷ್ಟಿತ್ವದಿಂದಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಆರಂಭವಾದವು. ಕೃಷಿಯನ್ನೇ ನಂಬಿದ್ದ ಲಿಂಗಾಯತ ಸಮುದಾಯವು ಶಿಕ್ಷಣದತ್ತ ಒಲವು ತೋರುವಂತೆ ಮಾಡಿದರು. ವಸತಿನಿಲಯಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಆ ಕಾಲದಲ್ಲಿಯೇ ಸಹಕಾರ ತತ್ವದ ಅಡಿ ಕೃಷಿಕರಿಗಾಗಿ ಮಾರುಕಟ್ಟೆ ನಿರ್ಮಾಣ, ಕೃಷಿಯಲ್ಲಿ ತರಬೇತಿಗಾಗಿ ಪ್ರಾಯೋಗಿಕ ಜಮೀನು ಖರೀದಿ ಮತ್ತು ತರಬೇತಿ ಹೀಗೆ ಹತ್ತು ಹಲವು ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಂಡಿದ್ದು ಶಿರಸಂಗಿ ಸಂಸ್ಥಾನ.

ಈ ಸಂಸ್ಥಾನದ ಕೊನೆಯ ದೊರೆ ಲಿಂಗರಾಜ ದೇಸಾಯಿ(1861-1906) ಅವರು ಸಾರ್ವಜನಿಕ ಹಿತಾಸಕ್ತಿಗಾಗಿ ತಮ್ಮೆಲ್ಲ ಸಂಪತ್ತನ್ನೂ ವಿನಿಯೋಗಿಸಿದರು. ಸಾಮಾನ್ಯವಾಗಿ ರಾಜ್ಯಬೊಕ್ಕಸಕ್ಕೆ ಸಾರ್ವಜನಿಕರ ಆದಾಯ ಸೇರುತ್ತದೆ. ಇಲ್ಲಿ ಮಾತ್ರ ತ್ರಿವಿಧ ದಾಸೋಹಿಯಂತೆ ಸಂಸ್ಥಾನದ ಆಸ್ತಿ ಎಲ್ಲವೂ ಸಮುದಾಯದ ಹಿತಾಸಕ್ತಿಗಾಗಿ ವಿನಿಯೋಗಿಸಲು ‘ಶಿರಸಂಗಿ ಲಿಂಗರಾಜ ಟ್ರಸ್ಟ್‌’ ಸ್ಥಾಪಿಸಿದರು. ‘ಅರವತ್ತ ನಾಲ್ಕನೆಯ ಪುರಾತನ ಶಿವಶರಣ’ ಎಂದು ಅವರು ಸಮಕಾಲೀನರಿಂದ ಕರೆಯಿಸಿಕೊಂಡಿದ್ದರು.

ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪನವರು, ಪುಟ್ಟಣ್ಣ ಶೆಟ್ಟರು ಸೇರಿದಂತೆ ಆ ಕಾಲದ ಹಿರಿಯರ ಜೊತೆಗೆ ಸಮಾಲೋಚಿಸಿ, ಸಮಾಜ ಸಂಘಟನೆಗೆ ಮುಂದಾದರು. ಹಾನಗಲ್‌ ಕುಮಾರಸ್ವಾಮಿ ಅವರು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಪ್ರಾರಂಭಿಸಿದರು.

ಹಾವೇರಿ ಹತ್ತಿರದ ದೇವಿಹೊಸುರು ಗ್ರಾಮದಲ್ಲಿ 1.10 ಎಕರೆ ಜಮೀನನ್ನು ಖರೀದಿಸಿ, ಕೃಷಿ ತರಬೇತಿ ಶಾಖೆಯನ್ನು ಪ್ರಾರಂಭಿಸಿ
ದರು.ನವಲಗುಂದ ಮತ್ತು ಶಿರಸಂಗಿ ಊರುಗಳಲ್ಲಿ ಕೆರೆಗಳನ್ನು ನಿರ್ಮಿಸಿ ಹೊಲಗಳಿಗೆ ನೀರುಣಿಸುವ ತಂತ್ರಜ್ಞಾನವನ್ನು ರೂಢಿಗೆ ತಂದರು.ವಿಜಯಪುರದಲ್ಲಿ ಸಹಕಾರ ತತ್ವದಡಿಯಲ್ಲಿ ಏಳೂರ ಗೌಡರ ದಲ್ಲಾಳಿ ಮಂಡಳಿಯನ್ನು ಸ್ಥಾಪಿಸಿದರು. ಕೃಷಿ, ಶಿಕ್ಷಣ, ಮಾರುಕಟ್ಟೆ, ಸಾಮಾಜಿಕ ಸುಧಾರಣೆ ಹೀಗೆ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಲಿಂಗರಾಜ ಅವರು ಆಧುನಿಕ ಕರ್ನಾಟಕದ ನಿರ್ಮಾಪಕರೆನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT