ಬುಧವಾರ, ಮಾರ್ಚ್ 29, 2023
27 °C

ಕೃಷ್ಣಾ ಮೇಲ್ದಂಡೆ ಯೋಜನೆ ಶೀಘ್ರ ನನಸು: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ವಾದಗಳು ಮುಗಿದಿವೆ. ಆಂಧ್ರದ ವಾದ ಮಾತ್ರ ಬಾಕಿ ಇದೆ. ಕೆಲವೇ ದಿನಗಳಲ್ಲಿ ಇದೂ ಬಗೆಹರಿಯಲಿದೆ’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಶ್ವಾಸ
ವ್ಯಕ್ತಪಡಿಸಿದರು.

‘ಎರಡನೇ ನ್ಯಾಯಾಧೀಕರಣವು 2013ರಲ್ಲಿ ನಮಗೆ 130 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಅನುಮತಿ ನೀಡಿತ್ತು. ಆದರೆ, ಬಳಸಿಕೊಳ್ಳಲು ಆಗಿಲ್ಲ. ಸದ್ಯ ನಾಲ್ಕೂ ರಾಜ್ಯಗಳಿಂದ ಸುಪ್ರೀಂಕೋರ್ಟ್‌ನಲ್ಲಿ ದಾವೆಗಳಿವೆ. ಮೇಲಾಗಿ, ಯೋಜನೆ ಅನುಷ್ಠಾನಕ್ಕಾಗಿ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಬೇಕು ಎಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಂದ ಜಂಟಿಯಾಗಿ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಎರಡೂ ರಾಜ್ಯಗಳ ವಾದ ಒಂದೇ ಆಗಿದ್ದರಿಂದ ಶೀಘ್ರ ನೀರು ಬಳಕೆ ಸಾಧ್ಯವಾಗಲಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಒಟ್ಟಾರೆ 66.66 ಲಕ್ಷ ಹೆಕ್ಟೇರ್‌ ನೀರಾವರಿಗೆ ಅವಕಾಶವಿದ್ದು, ಬೃಹತ್‌ ನೀರಾವರಿ ಯೋಜನೆಗೆ 40 ಲಕ್ಷ ಹೆಕ್ಟೇರ್‌ ಒಳಪಡುತ್ತದೆ. ಈಗಾಗಲೇ 30 ಲಕ್ಷ ಹೆಕ್ಟೇರ್‌ ಪೂರ್ಣಗೊಂಡಿದೆ. ಇನ್ನೂ 10 ಲಕ್ಷ ಹೆಕ್ಟೇರ್‌ ಬಾಕಿಯಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕಾರ್ಯಗತವಾದರೆ 5.91 ಲಕ್ಷ ಹೆಕ್ಟೇರ್‌ ನೀರಾವರಿ ಆಗಲಿದೆ ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು