ಭಾನುವಾರ, ಡಿಸೆಂಬರ್ 8, 2019
19 °C

ಮೇಲ್‍ಮರವತ್ತೂರಿಗೆ ಒಪ್ಪಂದದ ಬಸ್‌ ವಿಶೇಷ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ತಮಿಳುನಾಡಿನ ಮೇಲ್‍ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಹೋಗಲು ಸಾಂದರ್ಭಿಕ ಒಪ್ಪಂದದ ಮೇಲೆ ಬಸ್‌ಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಿದೆ.

ಈ ಸಂಬಂಧ ನಗರದ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣದ ಘಟಕ-5, 6 ಮತ್ತು ಶಾಂತಿನಗರದಲ್ಲಿರುವ ಘಟಕ-1, 2, 4 ರಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ.

ಕರ್ನಾಟಕ ಸಾರಿಗೆ ಮಾದರಿಯ 55 ಆಸನಗಳ ವಾಹನಗಳನ್ನು ಪ್ರತಿ ಕಿಲೋಮೀಟರ್‌ಗೆ ₹ 39 ದರದಲ್ಲಿ ಒದಗಿಸಲಾಗುವುದು. ಅಂತರರಾಜ್ಯ ಪರವಾನಗಿ ದರವನ್ನು ಪ್ರತ್ಯೇಕ ಪಾವತಿಸಬೇಕು.

ಬೆಂಗಳೂರು ಹೊರತಾಗಿ ಇತರ ಸ್ಥಳಗಳಲ್ಲಿ ನಿಗಮದ ಬಸ್ ನಿಲ್ದಾಣ ಮತ್ತು ಘಟಕಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 77609 90535 ಸಂಪರ್ಕಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು