ಕುಣಿಗಲ್ ಗಿರಿ ಸೇರಿ ಆರು ಮಂದಿ ಬಂಧನ

ಶುಕ್ರವಾರ, ಏಪ್ರಿಲ್ 26, 2019
24 °C

ಕುಣಿಗಲ್ ಗಿರಿ ಸೇರಿ ಆರು ಮಂದಿ ಬಂಧನ

Published:
Updated:

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಡೆಸಿದ ಹಾಗೂ ಅದರ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪದಡಿ ಕುಖ್ಯಾತ ಕಳ್ಳ ಕುಣಿಗಲ್ ಗಿರಿ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸಾರ್ವಜನಿಕರು ನೀಡಿರುವ ಮಾಹಿತಿಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಅವರೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕುಣಿಗಲ್‌ ಗಿರಿ ಜೊತೆ ಆತನ ಚಿಕ್ಕಪ್ಪನ ಮಗ ವಿನೋದ್ ಸಹ ಕೃತ್ಯ ಎಸಗುತ್ತಿದ್ದ. ಆತನನ್ನೂ ಬಂಧಿಸಲಾಗಿದೆ’ ಎಂದರು.

‘ಪ್ರತ್ಯೇಕ ಪ್ರಕರಣಗಳಲ್ಲಿ ಕಿರಿಟ್ ಮೆಹ್ತಾ, ಹೊಂಬೇಗೌಡ, ಮಧು ಹಾಗೂ ದಿನೇಶ್ ಎಂಬುವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಚೇತನ್ ಎಂಬಾತ ತಲೆಮರೆಸಿಕೊಂಡಿದ್ದಾನೆ’ ಎಂದು ಅಧಿಕಾರಿ ಹೇಳಿದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !