ಬೆಂಗಳೂರು: ಕುಡಿದು ಕೂಗಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಕುತ್ತಿಗೆ ಸೀಳಿ ಮಹಿಳೆಯನ್ನು ಕೊಲೆ ಮಾಡಿದ್ದ ಭರತ್ ಅಲಿಯಾಸ್ ಗುಂಡ (26) ಎಂಬಾತನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಕನಕಪುರದ ಭರತ್, ಉಬರ್ ಕ್ಯಾಬ್ ಚಾಲನೆ ಮಾಡಿಕೊಂಡು ದೊಡ್ಡಕಲ್ಲಸಂದ್ರದ ವಲ್ಲಭನಗರದಲ್ಲಿ ನೆಲೆಸಿದ್ದ. ಭಾನುವಾರ (ಮೇ 5ರಂದು) ರಾತ್ರಿ 11 ಗಂಟೆ ಸುಮಾರಿಗೆ ಪಕ್ಕದ ಮನೆಯ ಭಾಗ್ಯಮ್ಮ (45) ಎಂಬುವರನ್ನು ಕೊಂದು ಹೊರಗಿನಿಂದ ಚಿಲಕ ಹಾಕಿಕೊಂಡು ಪರಾರಿಯಾಗಿದ್ದ. ಗುರುವಾರ ಬೆಳಿಗ್ಗೆ ಅವರ ಅಣ್ಣ ಎಚ್.ಎಸ್.ನಾರಾಯಣ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಪೊರಕೆಯಲ್ಲಿ ಹೊಡೆದರು: ‘ಭಾನುವಾರ ಸಂಜೆ ನಾನು ಹಾಗೂ ನಾಲ್ವರು ಸ್ನೇಹಿತರು ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದೆವು. ಕುಡಿದ ಮತ್ತಿನಲ್ಲಿ ಎಲ್ಲರೂ ಜೋರಾಗಿ ಮಾತನಾಡುತ್ತಿದ್ದೆವು. ಆಗ ಭಾಗ್ಯಮ್ಮ, ‘ಯಾಕಿಷ್ಟು ಕೂಗಾಡುತ್ತಿದ್ದೀರಾ? ಅಕ್ಕ–ಪಕ್ಕದ ಮನೆಯವರಿಗೆ ತೊಂದರೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದರು. ನಶೆಯಲ್ಲಿದ್ದ ನಾನು ಅವರೊಟ್ಟಿಗೆ ವಾಗ್ವಾದ ನಡೆಸಿದ್ದೆ’ ಎಂದು ಭರತ್ ವಿವರಿಸಿದ್ದಾಗಿ ಪೊಲೀಸರು ಹೇಳಿದರು.

‘ಈ ಗಲಾಟೆಯಿಂದ ಬೇಸರಗೊಂಡು ಸ್ನೇಹಿತರೆಲ್ಲ ಪಾರ್ಟಿ ಅರ್ಧಕ್ಕೇ ಬಿಟ್ಟು ಹೊರಟು ಹೋದರು. ಆ ನಂತರ ಭಾಗ್ಯಮ್ಮ ಮೇಲೆ ಸಿಟ್ಟು ಹೆಚ್ಚಾಗಿ, ನಾನೊಬ್ಬನೇ ಕುಡಿಯುತ್ತ ಕುಳಿತಿದ್ದೆ. ರಾತ್ರಿ 11 ಗಂಟೆಯಾದರೂ ಅವರು ನನಗೆ ಬೈಯ್ಯುತ್ತಲೇ ಇದ್ದರು.’

‘ಸುಮ್ಮನಿರುವಂತೆ ಹೇಳಲು ಅವರ ಮನೆಗೆ ಹೋದಾಗ ನನ್ನ ಕೈ ಕಚ್ಚಿ, ಪೊರಕೆಯಿಂದ ಹೊಡೆದರು. ಕೋಪದ ಭರದಲ್ಲಿ ಅವರ ತಲೆಯನ್ನು ಗೋಡೆಗೆ ಗುದ್ದಿಸಿ, ನಂತರ ತರಕಾರಿ ಕತ್ತರಿಸುವ ಚಾಕುವಿನಿಂದ ಕುತ್ತಿಗೆ ಸೀಳಿದ್ದೆ. ಬಳಿಕ ದಿಕ್ಕು ತೋಚದಂತಾಯಿತು. ಪೊಲೀಸರು ಬಂಧಿಸುತ್ತಾರೆ ಎಂಬ ಭಯದಿಂದ ತಕ್ಷಣ ಅಲ್ಲಿಂದ ಹೊರಟು ಕನಕಪುರಕ್ಕೆ ತೆರಳಿದ್ದೆ’ ಎಂದು ಹೇಳಿಕೆ ಕೊಟ್ಟಿದ್ದಾನೆ.

ಕರೆಗೆ ಸಿಕ್ಕಿರಲಿಲ್ಲ: ‘ಮೇ 5ರ ಮಧ್ಯಾಹ್ನ ನಮ್ಮ ಮನೆಗೆ ಬಂದಿದ್ದ ಭಾಗ್ಯಮ್ಮ, ಊಟ ಮಾಡಿಕೊಂಡು 4.30ರ ಸುಮಾರಿಗೆ ಹೊರಟು ಹೋಗಿದ್ದಳು. ಆ ದಿನ ರಾತ್ರಿ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ. ಮಲಗಿರಬಹುದು ಎಂದು ನಾವೂ ಸುಮ್ಮನಾಗಿದ್ದೆವು. ಎರಡು ದಿನಗಳ ನಂತರ ಆಕೆಯ ಮೊಬೈಲ್ ಸ್ವಿಚ್ಡ್ ಆಫ್ ಆಯಿತು. ಇದರಿಂದ ಅನುಮಾನ ಬಂದು, ಗುರುವಾರ ಬೆಳಿಗ್ಗೆ ಮನೆಗೆ ಹೋದರೆ ಆಕೆ ಸತ್ತು ಹೋಗಿದ್ದಳು’ ಎಂದು ಮೃತರ ಅಣ್ಣ ನಾರಾಯಣ ದೂರು ಕೊಟ್ಟಿದ್ದರು.

ಆ ದೂರಿನನ್ವಯ ಪೊಲೀಸರು ಕೊಲೆ (ಐಪಿಸಿ 302) ಹಾಗೂ ಸಾಕ್ಷ್ಯನಾಶ (201) ಆರೋಪಗಳಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡರು. ಸ್ಥಳೀಯರನ್ನು ವಿಚಾರಣೆ ನಡೆಸಿದಾಗ, ಭಾನುವಾರ ಸಂಜೆ ಭಾಗ್ಯಮ್ಮ ಹಾಗೂ ಭರತ್ ನಡುವೆ ಮಾತಿನ ಚಕಮಕಿ ನಡೆದಿದ್ದ ವಿಚಾರ ಗೊತ್ತಾಗಿತ್ತು. ಆತ ಕೂಡ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರಿಂದ ಭರತ್ ಮೇಲೇ ಅನುಮಾನ ದಟ್ಟವಾಗಿತ್ತು. ಉಬರ್ ಸಂಸ್ಥೆಯಿಂದ ಚಾಲಕನ ಮನೆ ವಿಳಾಸ ತಿಳಿದು, ಕನಕಪುರದಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.