ಸಿರಿಸೇನಾ ಪಕ್ಷದ ಜತೆಗಿನ 50 ವರ್ಷಗಳ ಮಹಿಂದ ರಾಜಪಕ್ಸೆ ನಂಟು ಕಡಿತ

7

ಸಿರಿಸೇನಾ ಪಕ್ಷದ ಜತೆಗಿನ 50 ವರ್ಷಗಳ ಮಹಿಂದ ರಾಜಪಕ್ಸೆ ನಂಟು ಕಡಿತ

Published:
Updated:
Deccan Herald

ಕೊಲಂಬೊ: ಶ್ರೀಲಂಕಾದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಪಕ್ಷದ ಜೊತೆಗಿನ ಐದು ದಶಕಗಳನ್ನು ನಂಟನ್ನು ಕೊನೆಗೊಳಿಸಿರುವ ಮಹಿಂದ ರಾಜಪಕ್ಸೆ ಅವರು ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿಯಿಂದ (ಎಸ್‌ಎಲ್ಎಫ್‌ಪಿ) ಹೊರಬಂದಿರುವ ಅವರು, ತಮ್ಮ ಬೆಂಬಲಿಗರು ಸ್ಥಾಪಿಸಿರುವ ಶ್ರೀಲಂಕಾ ಪೀಪಲ್ಸ್ ಪಾರ್ಟಿಯನ್ನು (ಎಸ್‌ಎಲ್‌ಪಿಪಿ) ಸೇರಿದ್ದಾರೆ.

ಈ ಮೂಲಕ ಜನವರಿ 5ರಂದು ನಡೆಯುವ ಚುನಾವಣೆಯಲ್ಲಿ ಹೊಸ ಪಕ್ಷದ ಅಡಿ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ. ರಾಜಪಕ್ಸೆ ರಾಜಕೀಯ ಮರುಪ್ರವೇಶಕ್ಕೆ ಅನುಕೂಲವಾಗುವಂತೆ ಅವರ ಬೆಂಬಲಿಗರು ಕಳೆದ ವರ್ಷವೇ ಪಕ್ಷವನ್ನು ಕಟ್ಟಿದ್ದರು. ಇದೇ ಫೆಬ್ರುವರಿಯಲ್ಲಿ ನಡೆದ ಸ್ಥಳೀಯ ಪರಿಷತ್ ಚುನಾವಣೆಯಲ್ಲಿ ಈ ಪಕ್ಷವು ಮೂರನೇ ಎರಡರಷ್ಟು ಮತಗಳನ್ನು ಪಡೆದು ಜಯಿಸಿತ್ತು.

2005ರಿಂದ ಒಂದು ದಶಕದ ಕಾಲ ಶ್ರೀಲಂಕಾದಲ್ಲಿ ಅಧಿಕಾರದಲ್ಲಿದ್ದ ರಾಜಪಕ್ಸೆ ಅವರನ್ನು ಸಿರಿಸೇನಾ ಅವರು 2015ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿಸಿದ್ದರು. ಇದಕ್ಕೆ ರನಿಲ್ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿಯು ಬೆಂಬಲ ನೀಡಿತ್ತು. 

ಇದೇ ಅಕ್ಟೋಬರ್‌ನಲ್ಲಿ ನಡೆದ ರಾಜಕೀಯ ವಿಪ್ಲವದಲ್ಲಿ ರನಿಲ್ ಅವರನ್ನು ಪದಚ್ಯುತಗೊಳಿಸಿ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ಸಿರಿಸೇನಾ ನೇಮಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !