ಚಾರ್ಮಾಡಿಯ ಚಿತ್ರಗಳು

7

ಚಾರ್ಮಾಡಿಯ ಚಿತ್ರಗಳು

Published:
Updated:

ಚಾರ್ಮಾಡಿ ಘಾಟಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿ ಹಂಚಿಕೊಂಡಿರುವ ಸುಂದರ ತಾಣ. ಪಶ್ಚಿಮ ಘಟ್ಟಗಳ ಸಾಲಿನ ಒಂದು ಶ್ರೇಣಿ ಇದು. ಈ ಘಟ್ಟಗಳ ಕೆಳಭಾಗದಲ್ಲಿ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಚಾರ್ಮಾಡಿ ಘಾಟಿ ಎಂಬ ಹೆಸರು ಬಂದಿದೆ. ಮಂಗಳೂರಿನಿಂದ ತಮಿಳುನಾಡಿನ ಗಡಿ ಪ್ರದೇಶ ವಿಲ್ಲುಪುರಂ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೭೩ ಚಾರ್ಮಾಡಿ ಘಾಟಿಯಲ್ಲಿ ಸಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮುಖ್ಯ ರಸ್ತೆ  ಚಾರ್ಮಾಡಿ ಘಟ್ಟದಲ್ಲಿ ಹಾದು ಹೋಗಿದೆ. ಎತ್ತರವಾದ ಬೆಟ್ಟ-ಗುಡ್ಡ, ಆಳವಾದ ಕಣಿವೆ-ಪ್ರಪಾತಗಳ ನಡುವೆ ಸಾಗುವ ೨೨ ಕಿ.ಮೀ ಉದ್ದದ ಈ ರಸ್ತೆ ೨೧ ತಿರುವು, ೧೨ ಹಿಮ್ಮುರಿ ತಿರುವುಗಳನ್ನು ಹೊಂದಿದೆ. ಮಳೆಗಾಲದಲ್ಲಿ ಹಸುರಿನಿಂದ ಕಂಗೊಳಿಸುವ ದಟ್ಟ ಕಾಡು, ಜಲಪಾತಗಳು, ವನ್ಯಮೃಗಗಳು, ಸಣ್ಣ ಝರಿ -ತೊರೆಗಳು, ಶೋಲ ಕಾಡು, ಅಪರೂಪವಾದ ಹುಲ್ಲುಗಾವಲುಗಳು ಪ್ರಕೃತಿಯೆಂಬ ಸುಂದರ ಕಲಾಕೃತಿಯ ದರ್ಶನ ಮಾಡಿಸುತ್ತವೆ.

ವರ್ಷಕ್ಕೆ ಸರಾಸರಿ ೪ ಸಾವಿರ ಮಿ.ಮೀ ಮಳೆ ಬೀಳುವ ಚಾರ್ಮಾಡಿ ಘಟ್ಟಗಳಲ್ಲಿ ಅಮೇದಿಕಲ್ಲು ಬೆಟ್ಟ, ಬಾಳೆಕಲ್ಲು ಬೆಟ್ಟ, ಕೊಡೆಕಲ್ಲು ಬೆಟ್ಟ, ಜೇನುಕಲ್ಲು ಬೆಟ್ಟ, ಎತ್ತಿನ ಭುಜ ಬೆಟ್ಟ, ದೀಪದಕಲ್ಲು ಬೆಟ್ಟ, ಶಿಶಿಲ ಬೆಟ್ಟ ಮೊದಲಾದ ಬೆಟ್ಟಗಳಿವೆ. ಜೊತೆಗೆ ಅಲೇಖಾನ್, ಜೇನುಕಲ್ಲು, ಕಲ್ಲರ್ಬಿ, ಹಕ್ಕಿಕಲ್ಲು, ಬಂಡಾಜೆ, ಆನಡ್ಕ ಮೊದಲಾದ ಸುಂದರ ಜಲಪಾತಗಳಿವೆ.

ಮಳೆಗಾಲದಲ್ಲಿ ಮೈದುಂಬಿಕೊಳ್ಳುವ ಚಾರ್ಮಾಡಿ ಘಾಟಿ ಅಪರೂಪದ ಪ್ರಕೃತಿ ಸಿರಿ. ವಿಶಿಷ್ಟ ಸಸ್ಯ ಪ್ರಭೇಧಗಳ ಈ ಘಾಟಿಯ ಸೌಂದರ್ಯಕ್ಕೆ ಮಳೆ-ಮಂಜು ಜೊತೆಯಾದರೆ ದೇವರ ಸುಂದರ ಕಲಾಕೃತಿಗೆ ಬಣ್ಣ ತುಂಬಿದಂತೆ. ಜೂನ್‌ನಿಂದ ಜನವರಿಯವರೆಗೂ ಭೇಟಿಗೆ ಉತ್ತಮ ಸಮಯ. 

ಸುಧಾ: 19, ಜುಲೈ, 2018

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !