‘ನಾನು ಸಚಿನ್ ಎಸ್. ಶೆಟ್ಟಿ.ವೃತ್ತಿಯಲ್ಲಿ ಸಿನಿಮಾಟೊಗ್ರಾಫರ್. ಬೈಕ್ನಲ್ಲೇ ಸಾಹಸ ಯಾನ ಕೈಗೊಳ್ಳುವುದು ನನ್ನ ಹವ್ಯಾಸ. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಬೈಕರ್ಸ್ ಕ್ಲಬ್ಗಳಲ್ಲಿ ನಾನು ಸಕ್ರಿಯ ಸದಸ್ಯ. 2017ರಲ್ಲಿ ಲೇಹ್–ಲಡಾಕ್ಗೆ ನಾನು ಏಕಾಂಗಿಯಾಗಿ ಕೈಗೊಂಡ ಬೈಕ್ ಪ್ರವಾಸ ನನಗೆ ಅವಿಸ್ಮರಣೀಯ. ಇತ್ತೀಚೆಗೆ ಬೈಕ್ನಲ್ಲೇ ಭಾರತ–ನೇಪಾಳ– ಭೂತಾನ್ ಪ್ರವಾಸ ಹೋಗಿಬಂದೆ.

ಬೈಕ್ನಲ್ಲಿ ಸಾಹಸ ಯಾನ ಕೈಗೊಳ್ಳುವವರು ತಂತ್ರಜ್ಞಾನದ ನೆರವು ಪಡೆದುಕೊಂಡರೆ ಒಬ್ಬ ಆಪ್ತ ಸಂಗಾತಿಯ ಜೊತೆ ಪ್ರಯಾಣಿಸಿದಂತೆಯೇ ಆಗುತ್ತದೆ. ಪ್ರವಾಸ ನಿಗದಿ ಮಾಡಿದ ತಕ್ಷಣ ಅಥವಾ ನಿಗದಿ ಮಾಡುವುದಕ್ಕೂ ಮೊದಲೇ ಯಾವ್ಯಾವ ಆ್ಯಪ್ಗಳ ನೆರವು ಪಡೆಯಬೇಕು, ಇತರ ತಂತ್ರಜ್ಞಾನಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ನಿರ್ಧರಿಸಬೇಕು.

ನನ್ನ ಪ್ರವಾಸಕ್ಕೆ ನಾನು ‘ಲೇಹ್– ಲಡಾಕ್– ಕ್ಯಾಮೆರಾ’ ಎಂದು ಹೆಸರಿಟ್ಟುಕೊಂಡಿದ್ದೆ. ಅದನ್ನು ಟ್ರಾವೆಲರ್ಸ್ ಸಾಕ್ಷ್ಯಚಿತ್ರವಾಗಿ ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ಹಂತ ಹಂತವಾಗಿ ಲೈವ್ ಪ್ರಸಾರ ಮಾಡುವವನಿದ್ದೆ. ಹಾಗಾಗಿಜಿಪಿಎಸ್ ನೇವಿಗೇಟರ್, ಗೋಪ್ರೊ ಕ್ಯಾಮೆರಾ, ಮೊಬೈಲ್, ಕ್ಯಾಮೆರಾ ಚಾರ್ಜರ್, ಪವರ್ಬ್ಯಾಂಕ್,ಟೂಲ್ ಕಿಟ್, ಪೆಟ್ರೋಲ್ ಕ್ಯಾನ್, ಪಂಪ್, ಅಲ್ಪಸ್ವಲ್ಪ ಆಹಾರ, ನೀರಿನ ಕ್ಯಾನ್ (ಅದಕ್ಕೆ ಒಂದು ಸಣ್ಣ ಪೈಪ್ ಜೋಡಿಸಿ ಹೆಲ್ಮೆಟ್ ಮೂಲಕ ಬಾಯಿಗೆ ನೀರು ಪೂರೈಕೆಯಾಗುತ್ತಿರುತ್ತದೆ), ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಆಕ್ಸಿಜನ್ ಬ್ಯಾಗ್, ನನ್ನ ಬಟ್ಟೆಗಳು, ಕೆಲವು ಪ್ರದೇಶಗಳ ಕುರಿತಾದ ಮುದ್ರಿತ ಮಾಹಿತಿ– ಇವಿಷ್ಟು ನನ್ನ ಲಗೇಜ್ ಆಗಿತ್ತು. ಈ ಪ್ರವಾಸಕ್ಕೆ ಗೂಗಲ್ ಮ್ಯಾಪ್ ಮತ್ತು ಜಿಪಿಎಸ್ ನೇವಿಗೇಟರ್ ಮಾತ್ರ ಬಳಸಿದ್ದೆ.

ಇನ್ನಷ್ಟು:ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಕ್ಕೆ ಡಿಜಿಟಲ್ ನೆರವು

ಆದರೆ ಜಿಪಿಎಸ್ ನೇವಿಗೇಟರ್ ಮತ್ತು ಗೂಗಲ್ ಮ್ಯಾಪ್ ಭೂತಾನ್ ಪ್ರವಾಸದ ವೇಳೆ ಕೆಲವು ಬಾರಿ ಕೈಕೊಟ್ಟಿತ್ತು. ಹಾಗಾಗಿ ಭೂತಾನ್ ಪ್ರವೇಶಿಸಿದ ಬಳಿಕ ಅಲ್ಲಿನ ಸ್ಥಳೀಯರ ಸಲಹೆಯಂತೆ ‘mapsme.com’ ಬಳಸಿದೆ. ಇದು ಪ್ಲೇಸ್ಟೋರ್ನಲ್ಲಿಯೂ ಸಿಗುತ್ತದೆ. ಇಡೀ ಭೂತಾನ್ನ ಮ್ಯಾಪ್ ಡೌನ್ಲೋಡ್ ಮಾಡಿಕೊಂಡು ಬಳಿಕ ಆಫ್ಲೈನ್ನಲ್ಲೂ ಬಳಸಬಹುದು. ಹೋಟೆಲ್, ಪೆಟ್ರೋಲ್ ಬಂಕ್, ಆಸ್ಪತ್ರೆ, ವಿಶ್ರಾಂತಿಗೆ ಅವಕಾಶವಿರುವ ಪೆಟ್ರೋಲ್ ಬಂಕ್ ಎಲ್ಲಿದೆ ಮತ್ತು ದರ ಎಷ್ಟು ಮುಂತಾದ ಮಾಹಿತಿಯನ್ನು ಅದರಲ್ಲೇ ತಿಳಿದುಕೊಂಡೆ.

ನೇಪಾಳ ಮತ್ತು ಭೂತಾನ್ನಲ್ಲಿ ಟೂರಿಸ್ಟ್ ಮತ್ತು ಸ್ಥಳೀಯ ದರಗಳು ಎಲ್ಲಾ ವಸ್ತುಗಳಿಗೆ ಅನ್ವಯವಾಗುತ್ತವೆ. ಹಾಗಾಗಿ ಇದರಲ್ಲಿ ಪಡೆದ ಮಾಹಿತಿಗಳು ನನಗೆ ಬಹಳ ನೆರವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.