ಅಫ್ಗಾನಿಸ್ತಾನ: ಮಿತ್ರಪಡೆಗಳಿಗೆ ಎಲ್‌ಇಟಿ ಉಗ್ರರ ಬೆದರಿಕೆ

ಭಾನುವಾರ, ಜೂನ್ 16, 2019
28 °C
ಅಮೆರಿಕದ ಪೆಂಟಗನ್‌ ವರದಿಯಲ್ಲಿ ಉಲ್ಲೇಖ

ಅಫ್ಗಾನಿಸ್ತಾನ: ಮಿತ್ರಪಡೆಗಳಿಗೆ ಎಲ್‌ಇಟಿ ಉಗ್ರರ ಬೆದರಿಕೆ

Published:
Updated:

ವಾಷಿಂಗ್ಟನ್: ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಪಡೆ ಹಾಗೂ ಮಿತ್ರಪಡೆಗಳಿಗೆ ಪಾಕಿಸ್ತಾನ ಮೂಲದ ಲಷ್ಕರ್‌ ಎ ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯು ಪ್ರಮುಖ ಬೆದರಿಕೆಯಾಗಿ ಪರಿಣಮಿಸಿದೆ ಎಂದು ಪೆಂಟಗನ್‌ ವರದಿ ಹೇಳಿದೆ.

ಈ ಸಂಘಟನೆಯ ಕನಿಷ್ಠ 300 ಉಗ್ರರು ಅಫ್ಗಾನಿಸ್ತಾನದಲ್ಲಿ ಸಕ್ರಿಯರಾಗಿದ್ದಾರೆ ಎಂದು ವರದಿ ತಿಳಿಸಿದೆ.

2008ರ ಮುಂಬೈ ದಾಳಿಯ ಹೊಣೆ ಹೊತ್ತುಕೊಂಡಿದ್ದ ಎಲ್‌ಇಟಿ ಉಗ್ರ ಸಂಘಟನೆಯನ್ನು ಅಮೆರಿಕ ಮತ್ತು ವಿಶ್ವಸಂಸ್ಥೆ ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸಿತ್ತು.

ಅಲ್‌ ಕೈದಾ, ಇಸ್ಲಾಮಿಕ್‌ ಮೂವ್‌ಮೆಂಟ್ ಆಫ್‌ ಉಜ್ಬೇಕಿಸ್ತಾನ ಸೇರಿದಂತೆ 20 ಪ್ರಮುಖ ಉಗ್ರ ಸಂಘಟನೆಗಳು ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಎಲ್‌ಇಟಿ ಐದನೇ ಸ್ಥಾನದಲ್ಲಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಹಕ್ಕಾನಿ ಜಾಲ, ಈಸ್ಟರ್ನ್‌ ತುರ್ಕಿಸ್ತಾನ್‌ ಇಸ್ಲಾಮಿಕ್‌ ಮೂವ್‌ಮೆಂಟ್‌(ಇಟಿಐಎಂ) ಮತ್ತು ಎಲ್‌ಇಟಿ ಉಗ್ರ ಸಂಘಟನೆಗಳು ಕೂಡ ಅಫ್ಗಾನಿಸ್ತಾನದಲ್ಲಿ ಅಮೆರಿಕದ ಮಿತ್ರ ಪಡೆಗಳಿಗೆ ಪ್ರಮುಖ ಬೆದರಿಕೆಯಾಗಿ ಪರಿಣಮಿಸಿವೆ ಎಂದು ರಕ್ಷಣಾ ಇಲಾಖೆ ಗುರುತಿಸಿರುವುದಾಗಿ  ಪೆಂಟಗನ್‌ನ ವರದಿಯಲ್ಲಿ ಹೇಳಲಾಗಿದೆ.

ಇಸ್ಲಾಮಿಕ್‌ ಎಮಿರೇಟ್‌ ಹೈ ಕೌನ್ಸಿಲ್‌ ಸಂಘಟನೆಯ ಸಾವಿರ ಉಗ್ರರು ಹಾಗೂ ತೆಹ್ರೀಕ್‌ ಎ ತಾಲಿಬಾನ್‌ ಪಾಕಿಸ್ತಾನ, ಹಕ್ಕಾನಿ ಜಾಲ ಮತ್ತು ಇತರ ಸಂಘಟನೆಗಳ ಅಂದಾಜು 3ಸಾವಿರದಿಂದ 5ಸಾವಿರ ಉಗ್ರರು ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂದೂ ಹೇಳಿದೆ. 

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !