ತನ್ನ ನಿಬಂಧನೆಗೆ ಎಳ್ಳುನೀರು ಬಿಟ್ಟ ಕನ್ನಡ ಸಾಹಿತ್ಯ ಪರಿಷತ್ತು?

7

ತನ್ನ ನಿಬಂಧನೆಗೆ ಎಳ್ಳುನೀರು ಬಿಟ್ಟ ಕನ್ನಡ ಸಾಹಿತ್ಯ ಪರಿಷತ್ತು?

Published:
Updated:

ನಿಬಂಧನೆಗೆ ಎಳ್ಳುನೀರು ಬಿಟ್ಟ ಸಾಹಿತ್ಯ ಪರಿಷತ್ತು!

ಕನ್ನಡ ಸಾಹಿತ್ಯ ಪರಿಷತ್ತು 103 ವರ್ಷಗಳನ್ನು ಮುಗಿಸಿದೆ! ಹಾಗೆಯೇ 83 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನೂ ಮಾಡಿ ಮುಗಿಸಿದೆ. ಸಾಹಿತ್ಯ ಪರಿಷತ್ತಿನ ಹುಟ್ಟಿಗೆ ಕಾರಣವೇನೆಂದು ನೋಡಿದರೆ- ಅದರ ನಿಬಂಧನೆಯಲ್ಲಿ (ಬೈಲಾ) ಬಹಳ ಮುಖ್ಯವಾಗಿ ಅದರ ಉದ್ದೇಶ: ‘ಕನ್ನಡ ಶಾಲೆಗಳ ಸ್ಥಾಪನೆ, ಅವುಗಳಿಗೂ ಮತ್ತು ಸಾಕ್ಷರತಾ ಪ್ರಚಾರಕ್ಕೂ ಪ್ರೋತ್ಸಾಹ’ ಎಂದಿದೆ!

‘ಕನ್ನಡ ಶಾಲೆಗಳ ಸ್ಥಾಪನೆ ಮತ್ತು ಅವುಗಳಿಗೆ ಪ್ರೋತ್ಸಾಹ’ ಎಂಬ ಬಹುಮುಖ್ಯವಾದ ಆಶಯ ಎಲ್ಲಿಗೆ ಹೋಯ್ತು? ನಮ್ಮ ಕಣ್ಣೆದುರಿಗೇ ಕಳೆದೊಂದು ದಶಕದಲ್ಲಿ 12,000ಕ್ಕೂ ಹೆಚ್ಚಿನ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಿವೆ. ಇವುಗಳೆಡೆಗೆ ಸಾಹಿತ್ಯ ಪರಿಷತ್ತು ಕಣ್ಣೆತ್ತಿಯೂ ನೋಡಿಲ್ಲ! ಇಷ್ಟೂ ವರ್ಷಗಳಿಂದ, ತನಗೂ ತನ್ನ ನಿಬಂಧನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ‘ಕನ್ನಡ ಶಾಲೆಗಳ ಹಿತರಕ್ಷಣೆ’ಗೂ ಸಂಬಂಧವೇ ಇಲ್ಲದಂತಿರುವ ಕಸಾಪ, ಕನ್ನಡದ ಹೆಸರಲ್ಲಿ ಅದ್ಧೂರಿ ಸಮ್ಮೇಳನಗಳನ್ನು ಮಾಡುತ್ತಾ ತನ್ನ ಉದ್ದೇಶಕ್ಕೆ ತಾನೇ ಎಳ್ಳುನೀರು ಬಿಟ್ಟಿದೆ ಎಂದೆನಿಸುತ್ತಿದೆ.

ಈಗಲಾದರೂ ಕಸಾಪ ಕಣ್ಣುಬಿಡಬೇಕು. ಮುಚ್ಚಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ತೆರೆಯಲು ಮತ್ತು ಬಿದ್ದು ಹೋಗುವಂತಿರುವ ಶಾಲಾ ಕಟ್ಟಡಗಳನ್ನು ಎತ್ತಿ ನಿಲ್ಲಿಸುವ ಮೂಲಕ ಕನ್ನಡ ಭಾಷೆಯ ಪ್ರಚಾರ ಮಾತ್ರವಲ್ಲ, ರಕ್ಷಣೆ ಮತ್ತು ಅಭಿವೃದ್ಧಿ ಎಂಬ ತನ್ನ ಮುಖ್ಯ ನಿಬಂಧನೆಗೆ ತಾನು ಬದ್ಧವಾಗಬೇಕಿದೆ. ಬದ್ಧತೆಗೆ ಪರೀಕ್ಷೆ ಎಂದರೆ- ಇದಾಗುವವರೆಗೆ ತಾನು ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದಿಲ್ಲವೆಂಬ ದಿಟ್ಟತನದ ನಿರ್ಧಾರ ಮಾತ್ರ. ಆಗ ಕಸಾಪಕ್ಕೆ ಮರುಜೀವ ಬಂದಂತಾಗುತ್ತದೆ.

ರೂಪ ಹಾಸನ, ಹಾಸನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !