ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಮಹಾ ರಾಜಕಾರಣ | 8 ಗಂಟೆಗೆ ಅಧಿವೇಶನ ಆರಂಭ
LIVE

ಕೆಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸುತ್ತಲೇ ಸಾಗಿದ್ದ ಮಹಾರಾಷ್ಟ್ರದ ಸರ್ಕಾರ ರಚನೆ ರಾಜಕಾರಣದ ಮೊದಲ ಹಂತವು ಮುಗಿದು, ಎರಡನೇ ಹಂತ ಆರಂಭವಾಗಿದೆ. ಮುಂಜಾನೆ 8 ಗಂಟೆಗೆ ವಿಧಾನಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದೆ. ಹಂಗಾಮಿ ಸ್ಪೀಕರ್ ಆಯ್ಕೆ ಮತ್ತು ಶಾಸಕರ ಪ್ರಮಾಣ ವಚನ ಪ್ರಕ್ರಿಯೆಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.
Last Updated 27 ನವೆಂಬರ್ 2019, 2:31 IST
ಅಕ್ಷರ ಗಾತ್ರ
02:2427 Nov 2019

ಮುಂದೆಯೂ ಎನ್‌ಸಿಪಿಯಲ್ಲಿಯೇ ಇರುವೆ: ಅಜಿತ್ ಪವಾರ್

ಖಾಸಗಿ ಹೊಟೆಲ್‌ನಲ್ಲಿ ತಂಗಿದ್ದ ಎನ್‌ಸಿಪಿ ಶಾಸಕರು ವಿಧಾನ ಭವನದತ್ತ ಹೊರಟಿದ್ದಾರೆ. ನಾನು ಈ ಹಿಂದೆಯೂ ಎನ್‌ಸಿಪಿಯಲ್ಲಿದ್ದೆ, ಈಗಲೂ ಎನ್‌ಸಿಪಿಯಲ್ಲಿದ್ದೇನೆ, ಮುಂದೆಯೂ ಎನ್‌ಸಿಪಿಯಲ್ಲಿಯೇ ಇರುತ್ತೇನೆ ಎಂದು ಅಜಿತ್‌ ಪವಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

11:5826 Nov 2019

ಮಹಾರಾಷ್ಟ್ರದಲ್ಲಿ ನಾಳೆ ಹೊಸ ಸರ್ಕಾರ ರಚನೆ ಸಾಧ್ಯತೆ: ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಸಾಮಾನ್ಯ ಕನಿಷ್ಠ ಅಂಶಗಳ ಕಾರ್ಯಸೂಚಿಗೆ ಸೋನಿಯಾ ಗಾಂಧಿ ಒಪ್ಪಿಗೆ

11:1926 Nov 2019

ಕಾಳಿದಾಸ ಕೊಳಂಬ್ಕರ್ ಮಹಾರಾಷ್ಟ್ರ 14ನೇ ವಿಧಾನಸಭೆಯ ಪ್ರೋ-ಟೆಮ್ ಸ್ಪೀಕರ್ ಆಗಿ ನೇಮಕ

11:1426 Nov 2019

ಐದು ವರ್ಷವೂ ಉದ್ಧವ್ ಒಬ್ಬರೇ ಮುಖ್ಯಮಂತ್ರಿ, ರೊಟೇಶನ್ ಇಲ್ಲ: ಶಿವಸೇನಾ

11:1226 Nov 2019

ಸಂಜೆ ನಡೆಯುವ ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಮೈತ್ರಿ ಶಾಸಕರ ಸಭೆಗೆ ಅಜಿತ್ ಪವಾರ್ (ಈಗಷ್ಟೇ ರಾಜೀನಾಮೆ ನೀಡಿದ ಉಪಮುಖ್ಯಮಂತ್ರಿ, ಎನ್‌ಸಿಪಿ ಮುಖಂಡ) ಕರೆತರಲು ಪ್ರಯತ್ನ ನಡೆಯುತ್ತಿದೆ.

11:0826 Nov 2019

ತಮಗೆ ಮುಖ್ಯಮಂತ್ರಿ ಪಟ್ಟ ಕೊಡುವ ಯಾರ ಜತೆಗಾದರೂ ಕೈಜೋಡಿಸಲು ಸಿದ್ಧ ಎಂದು ಚುನಾವಣಾ ಫಲಿತಾಂಶ ಬರುವ ಮುಂಚೆಯೇ ಶಿವಸೇನೆ ನಮ್ಮಲ್ಲಿ ಹೇಳಿತ್ತು: ದೇವೇಂದ್ರ ಫಡಣವೀಸ್

11:0726 Nov 2019

ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಪದಗ್ರಹಣ ಮಾಡಲು ಕಾರಣವಾದ ಎಲ್ಲ ನಿರ್ಧಾರಗಳನ್ನೂ ಸುಪ್ರೀಂ ಕೋರ್ಟ್ ಗಮನಿಸಬೇಕು. ಈ ವಿದ್ಯಮಾನವು ದೇಶದ ರಾಷ್ಟ್ರಪತಿಯ ಪಾತ್ರವನ್ನೂ ಸಂದೇಹಾಸ್ಪದವಾಗುವಂತೆ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

11:0326 Nov 2019

ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡಣವೀಸ್ ಅವರು ಮಂಗಳವಾರ ಸಂಜೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಮುಂಬಯಿ ರಾಜಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದರು.

10:5726 Nov 2019

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ರಾಜಭವನದತ್ತ ಹೊರಟ ದೇವೇಂದ್ರ ಫಡಣವೀಸ್

10:5226 Nov 2019

ಇದು ಸಾಂವಿಧಾನಿಕ ಪ್ರಜಾಪ್ರಭುತ್ವದ ವಿಜಯ. ಕುದುರೆ ವ್ಯಾಪಾರ ಮೂಲಕ ಸರ್ಕಾರ ರಚಿಸಬಹುದೆಂದು ಅವರು ಯೋಚಿಸಿದ್ದರು. ಇದು ದೇವೇಂದ್ರ ಫಡಣವೀಸ್ ಅವರ ವೈಫಲ್ಯವಷ್ಟೇ ಅಲ್ಲ, ದೆಹಲಿಯಲ್ಲಿ ಕುಳಿತಿರುವ ಅವರ ನಾಯಕರ ಮುಖಕ್ಕೆ ಬಿದ್ದ ಹೊಡೆತ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.