ಸಾಲಮನ್ನಾ: ರೈತರ ನೋಂದಣಿ ಶೇ 81ರಷ್ಟು ಪೂರ್ಣ

7

ಸಾಲಮನ್ನಾ: ರೈತರ ನೋಂದಣಿ ಶೇ 81ರಷ್ಟು ಪೂರ್ಣ

Published:
Updated:

ಚಾಮರಾಜನಗರ: ವಾಣಿಜ್ಯ ಬ್ಯಾಂಕುಗಳ ಬೆಳೆಸಾಲ ಮನ್ನಾ ಯೋಜನೆ ಅಡಿಯಲ್ಲಿ ಬ್ಯಾಂಕುಗಳಲ್ಲಿ ರೈತರು ಸ್ವಯಂ ದೃಢೀಕರಣ ಮಾಡಿಕೊಳ್ಳಲು ಸರ್ಕಾರ ನಿಗದಿಪಡಿಸಿರುವ ಗಡುವು ಗುರುವಾರಕ್ಕೆ (ಜ.10) ಕೊನೆಗೊಂಡಿದ್ದು, ಜಿಲ್ಲೆಯಲ್ಲಿ ಶೇ 81ರಷ್ಟು ರೈತರು ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ.

ಜಿಲ್ಲೆಯಲ್ಲಿ 26,874 ರೈತರು ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದು, ಈ ಪೈಕಿ 21,667 ರೈತರು ಬ್ಯಾಂಕುಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಸಲ್ಲಿಸಿ ಸ್ವಯಂ ದೃಢೀಕರಣ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು 27,002 ಅರ್ಹ ರೈತರು ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ವಿವಿಧ ಕಾರಣಗಳಿಗಾಗಿ ಕೆಲವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.

ಎರಡು ದಿನ ಸಾರ್ವತ್ರಿಕ ಮುಷ್ಕರ ಇದ್ದುದರಿಂದ ಬ್ಯಾಂಕುಗಳಲ್ಲಿ ವಹಿವಾಟು ನಡೆಯದೇ ಇರುವುದರಿಂದ ಕೆಲವು ರೈತರಿಗೆ ಸ್ವಯಂ ಧೃಢೀಕರಣ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ, ಇನ್ನೂ ಒಂದೆರಡು ದಿನಗಳ ಕಾಲ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಜಿಲ್ಲಾಡಳಿತದ ಉನ್ನತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !