ಶುಕ್ರವಾರ, ಫೆಬ್ರವರಿ 26, 2021
20 °C

ನಮ್ಮನ್ನು ಬದುಕಿಸಿದ ಆ ವ್ಯಕ್ತಿಗೊಂದು ಸಲಾಂ: ದಾಳಿ ಸಂತ್ರಸ್ತ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕ್ರೈಸ್ಟ್‌ಚರ್ಚ್‌ (ನ್ಯೂಜಿಲೆಂಡ್‌): ‘ಅಬ್ಬ ಅದೊಂದು ಮೈ ನಡುಗಿಸುವ ಕ್ಷಣ. ಬಂದೂಕುಧಾರಿಯೊಬ್ಬ ಮಸೀದಿಯ ಒಳಹೊಕ್ಕು ಇನ್ನೇನು ಗುಂಡು ಹಾರಿಸಿಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ ಹೀರೊ ರೀತಿ ಬಂದು ಆತನನ್ನು ಹಿಂದಿನಿಂದ ಹಿಡಿದುಕೊಂಡನು. ಬಡಿತ ನಿಂತಿದ್ದ ಹೃದಯಕ್ಕೆ ಮತ್ತೆ ಜೀವ ಬಂದಂತಾಯಿತು’

–ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ನಗರದ ಮಸೀದಿಯಲ್ಲಿ 49 ಮಂದಿಯನ್ನು ಗುಂಡಿಕ್ಕಿಕೊಂದ ಬಂದೂಕುಧಾರಿಯನ್ನು ಹಿಡಿದ ಕ್ಷಣವನ್ನು ಬದುಕುಳಿದ ಭಾರತ ಮೂಲದ ಫೈಸಲ್‌ ಸೈಯದ್‌ ಸ್ಮರಿಸಿಕೊಂಡದ್ದು ಹೀಗೆ.

‘ಸುಮಾರ 100 ಚದರ ಅಡಿಯ ಸಣ್ಣ ಮಸೀದಿಯಲ್ಲಿ ನಾವಿದ್ದೆವು. ಬಂದೂಕುಧಾರಿಯೊಬ್ಬ ಒಳಗೆ ಬಂದು ಇನ್ನೇನು ಗುಂಡು ಹಾರಿಸುತ್ತಾನೆ ಎನ್ನುವ ಸನ್ನಿವೇಷದಲ್ಲಿ ನಿಮ್ಮ ಹೃದಯ ಜೋರಾಗಿ ಬಡಿದುಕೊಳ್ಳಲು ಪ್ರಾರಂಭಿಸುತ್ತದೆ. ಆಗ ಏನು ಮಾಡಬೇಕೆಂದು ನಿಮಗೆ ತೋಚುವುದೇ ಇಲ್ಲ. ನಾನು ಮತ್ತು ನನ್ನ ಗೆಳೆಯ, ವ್ಯಕ್ತಿಯೊಬ್ಬ ಬಂದೂಕುಧಾರಿ ಹಿಂದೆ ಸರಿಯುತ್ತಿರುವುದನ್ನು ಗಮನಿಸಿದೆವು. ಆ ವ್ಯಕ್ತಿ, ಬಂದೂಕುಧಾರಿಯನ್ನು ಹಿಡಿದು ನಮ್ಮನ್ನು ಬದುಕಿಸಿದನು’ ಎಂದು ಫೈಸಲ್‌ ತಮ್ಮ ಅನುಭವವನ್ನು ಬಿಚ್ಚಿಟ್ಟರು.

 ‘ಒಂದು ವೇಳೆ ಆ ರೀತಿ ಆಗದಿದ್ದರೆ, ಇನ್ನಷ್ಟು ಮಂದಿ ಸಾಯುತ್ತಿದ್ದರು ಮತ್ತು ನಾನು ನಿಮ್ಮೊಂದಿಗೆ ಇಲ್ಲಿರುತ್ತಿರಲಿಲ್ಲ. ಆ ವ್ಯಕ್ತಿಗೊಂದು ಅಭಿನಂದನೆ. ಖಂಡಿತ ಆ ವ್ಯಕ್ತಿಯನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ’ ಎಂದರು.

‘ನಾನು ಈ ದೇಶದಲ್ಲಿ 10 ವರ್ಷದಿಂದ ವಾಸಿಸುತ್ತಿದ್ದೇನೆ. ನನ್ನ ಪ್ರೀತಿ ಪಾತ್ರರಾಗಲಿ, ಕುಟುಂಬದವರಾಗಿ ಅಥವಾ ನನ್ನ ಸಮುದಾಯದವರಾಗಿ ಯಾವುದೇ ರೀತಿಯ ಅಹಿತಕರ ಘಟನೆಯನ್ನು ಎದುರಿಸಿಲ್ಲ. ಬೇರೆಯವರ ರೀತಿ ನಾನು ಏನೋ ಒಂದು ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ. ಈ ಘಟನೆಯಿಂದ ದೇಶ ಬಿಟ್ಟು ಹೋಗಬೇಕು ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಸುಳಿದಿಲ್ಲ. ಇಲ್ಲಿರುವ ಜನರು ತುಂಬಾ ಒಳ್ಳೆಯವರು. ಘಟನೆಯ ನಂತರ ಕಿವಿ ಕುಟುಂಬದವರು ಹಾಗೂ ಸ್ನೇಹಿತರಿಂದಲೇ ನನಗೆ ಹೆಚ್ಚು ಕರೆಗಳು ಬಂದವು’ ಎಂದು ಹೇಳಿದರು. ಸೈಯದ್‌ ನ್ಯೂಜಿಲೆಂಡ್‌ಗೆ ಹೋಗುವ ಮೊದಲ ದೆಹಲಿಯಲ್ಲಿ ವಾಸಿಸುತ್ತಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು