ಬ್ಯಾಂಕ್‌ ಮಿತ್ರರ ಕಾಯಮಾತಿಗೆ ಆಗ್ರಹ

7

ಬ್ಯಾಂಕ್‌ ಮಿತ್ರರ ಕಾಯಮಾತಿಗೆ ಆಗ್ರಹ

Published:
Updated:
Prajavani

ವಿಜಯಪುರ: ಬ್ಯಾಂಕ್‌ ಮಿತ್ರರ ಕಾಯಮಾತಿಗೆ ಒತ್ತಾಯಿಸಿ ಬ್ಯಾಂಕ್ ಮಿತ್ರ ಸಂಘದ ವತಿಯಿಂದ ಈಚೆಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕೇವಲ ₹ 2000 ವೇತನದಲ್ಲಿ ಕಳೆದ 10 ವರ್ಷಗಳಿಂದ ಬ್ಯಾಂಕ್‌ ಮತ್ತು ಸಾರ್ವಜನಿಕರ ಮಧ್ಯ ಸೇತುವೆಯಾಗಿ ಬ್ಯಾಂಕ್‌ ಮಿತ್ರರು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ತುಟ್ಟಿ ಜೀವನದಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸಲು ತುಂಬಾ ಕಷ್ಟವಾಗಲಿದೆ. ಅಲ್ಲದೇ ಇರುವ ಸಂಬಳ ನೀಡುವಲ್ಲಿಯೂ ಬ್ಯಾಂಕ್‌ ಸಾಕಷ್ಟು ವಿಳಂಬ ಮಾಡಲಾಗುತ್ತಿದೆ. ಈ ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಜಿಲ್ಲೆಯ ಎಲ್ಲ ಬ್ಯಾಂಕ್‌ ಮಿತ್ರರನ್ನು ಕಾಯಂಗೊಳಿಸಿ ಕನಿಷ್ಠ ವೇತನ ಕೊಡಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬ್ಯಾಂಕ್ ಮಿತ್ರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ತೇಲಿ, ಉಪಾಧ್ಯಕ್ಷ ರಮೇಶ ರಾಠೋಡ, ಕಾರ್ಯದರ್ಶಿ ಶರಣಬಸಪ್ಪ ಕಲ್ಲಹಿಪ್ಪರಗಿ, ಸದಸ್ಯರಾದ ಸಿದ್ದು ಅರಕೇರಿ, ಗೋವಿಂದ ಭೋಸಲೆ, ಸಿದ್ದರಾಯ ಕಾಂಬಳೆ, ಮಂಜುಳಾ ತಿಕೋಟಿ, ರುಕ್ಮಿಣಿ, ರೇಖಾ, ಸದಾಶಿವ, ಬಸವರಾಜ, ದಯಾನಂದ, ಸಿದ್ದು ಮಣೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !