ಪರೀಕ್ಷೆ ಬರೆದ 4 ಸಾವಿರದಲ್ಲಿ 3 ಸಾವಿರ ಮಂದಿ ಫೇಲ್‌!

7

ಪರೀಕ್ಷೆ ಬರೆದ 4 ಸಾವಿರದಲ್ಲಿ 3 ಸಾವಿರ ಮಂದಿ ಫೇಲ್‌!

Published:
Updated:
Deccan Herald

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಎಂಟು ತಿಂಗಳ ನಂತರ ತರಾತುರಿಯಲ್ಲಿ ಪ್ರಥಮ ವರ್ಷದ ಎಂ.ಕಾಂ ಫಲಿತಾಂಶ ಪ್ರಕಟಿಸಿದೆ. ಇದರಲ್ಲಿ ‘ಅಡ್ವಾನ್ಸ್‌ ಪೈನಾಶಿಯಲ್‌ ಮ್ಯಾನೇಜ್‌ಮೆಂಟ್‌’ ವಿಷಯದ ಪರೀಕ್ಷೆ ಬರೆದ 4 ಸಾವಿರ ವಿದ್ಯಾರ್ಥಿಗಳಲ್ಲಿ ಸುಮಾರು 3 ಸಾವಿರ ಮಂದಿ ಅನುತ್ತೀರ್ಣರಾಗಿದ್ದಾರೆ.

‘ಅಬ್ಬಾ, ಫಲಿತಾಂಶ ಬಂತು’ ಎಂದು ನಿಟ್ಟುಸಿರು ಬಿಟ್ಟಿದ್ದ ವಿದ್ಯಾರ್ಥಿಗಳು ಈಗ ಮತ್ತೆ ಆತಂಕ ಎದುರಿಸುತ್ತಿದ್ದಾರೆ. ಈಗಾಗಲೇ ಎರಡನೇ ಸೆಮಿಸ್ಟರ್‌ ಪರೀಕ್ಷೆ ಬರೆದು ಮೂರನೇ ಸೆಮಿಸ್ಟರ್‌ ತರಗತಿಗಳು ಪ್ರಾರಂಭವಾಗಿವೆ. ವಿಶ್ವವಿದ್ಯಾಲಯದ ಈ ಯಡವಟ್ಟು ವಿರೋಧಿಸಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

‘ಪ್ರಶ್ನೆಪತ್ರಿಕೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳನ್ನು ಕೇಳಿದ್ದರು. ಈ ಬಗ್ಗೆ ಉಪನ್ಯಾಸಕರನ್ನು ಕೇಳಿದಾಗ ಸ್ನಾತಕೋತ್ತರದಲ್ಲಿ ಇದು ಸಾಮಾನ್ಯ ಎಂದು ಹೇಳಿ ಸಮಾಧಾನ ಮಾಡಿದ್ದರು. ಅಡ್ವಾನ್ಸ್‌ ಪೈನಾಶಿಯಲ್‌ ಮ್ಯಾನೇಜ್‌ಮೆಂಟ್‌ ವಿಷಯವನ್ನು ಹೊರತು ಪಡಿಸಿ ಬೇರೆ ವಿಷಯಗಳಲ್ಲಿ ಉತ್ತಮ ಅಂಕಗಳನ್ನೇ ಪಡೆದಿದ್ದೇವೆ’ ಎಂದು ಕೆಂಗೇರಿಯ ಸುರಾನ ಕಾಲೇಜಿನ ವಿದ್ಯಾರ್ಥಿಯೊಬ್ಬರು ತಿಳಿಸಿದರು.

‘ವಾಣಿಜ್ಯ ವಿಭಾಗದಲ್ಲಿ ಚಿನ್ನದ ಪದ ಪಡೆದಿದ್ದ ವಿದ್ಯಾರ್ಥಿಯೂ ಅಡ್ವಾನ್ಸ್‌ ಪೈನಾಶಿಯಲ್‌ ಮ್ಯಾನೇಜ್‌ಮೆಂಟ್‌ನಲ್ಲಿ 10 ಅಂಕಗಳನ್ನು ಪಡೆದಿದ್ದಾರೆ. ಅಲ್ಲದೆ, ಕನಿಷ್ಠ ಉತ್ತೀರ್ಣದ ಅಂಕ 25 ಅಥವಾ 28ಯೇ ಎನ್ನುವ ಬಗ್ಗೆಯೂ ನಮಗೆ ಗೊಂದಲವಿದೆ’ ಎಂದು ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಕೆ.ಆರ್.ವೇಣುಗೋಪಾಲ್‌, ‘ಆ ವಿಷಯದ ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನ ಮಾಡುತ್ತೇವೆ. 10 ದಿನದೊಳಗೆ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಯಾವೊಬ್ಬ ವಿದ್ಯಾರ್ಥಿಯ ಭವಿಷ್ಯ ಇದರಿಂದ ಹಾಳಾಗದಂತೆ ನೋಡಿಕೊಳ್ಳುತ್ತೇವೆ. ಮರುಮೌಲ್ಯಮಾಪನ ಅಥವಾ ಉತ್ತರಪತ್ರಿಕೆಯ ಜೆಕ್ಸಾರ್‌ ಪ್ರತಿಯಾಗಿ ವಿದ್ಯಾರ್ಥಿಗಳು ಯಾವುದೇ ಶುಲ್ಕವನ್ನು ಭರಿಸುವ ಅಗತ್ಯವಿಲ್ಲ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !